ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಆರ್ ಎಸ್ ಎಸ್ ನವರು ಮೂಲತ: ಭಾರತದವರಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಓರ್ವ ಅಲೆಮಾರಿ. ಈ ಅಲೆಮಾರಿಗೆ ಆರ್.ಎಸ್ ಎಸ್ ಬಗ್ಗೆ ಕಲ್ಪನೆ ಕೂಡ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಓರ್ವ ಅಲೆಮಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತು ಬಾದಾಮಿಗೆ ಹೋಗಿ ನಿಂತಿದ್ದಾರೆ. ಈಗ ಅಲ್ಲಿಂದಲೂ ಕಾಲ್ಕಿತ್ತು ಬೇರೆ ಕ್ಷೇತ್ರಗಳತ್ತ ಮುಖಮಾಡುತ್ತಿದ್ದಾರೆ. ಈ ಅಲೆಮಾರಿಗೆ ಆರ್ ಎಸ್ ಎಸ್ ಬಗ್ಗೆ ಏನು ಗೊತ್ತು?ಇವರ ಪಕ್ಷ ಕಾಂಗ್ರೆಸ್ ನ ನಾಯಕಿಯೇ ವಿದೇಶಿ ಮಹಿಳೆ. ಇಟಲಿಯವರು. ಇವರು ವಿದೇಶಿ ಮಹಿಳೆ ಸೆರಗು ಹಿಡಿದು ಓಡಾಟ ನಡೆಸಿದ್ದಾರೆ. ಇಂತವರಿಂದ ಆರ್ ಎಸ್ ಎಸ್ ಬಗ್ಗೆ, ರಾಷ್ಟ್ರಭಕ್ತಿ ಬಗ್ಗೆ ತಿಳಿದುಕೊಳ್ಳಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೇಶದಲ್ಲಿರುವ ಪ್ರತಿಯೊಬ್ಬರೂ ಭಾರತ ಮಾತೆ ಆರಾಧಾಕರಾಗಬೇಕು. ರಾಷ್ಟ್ರ ಭಕ್ತಿ ಹೊಂದಬೇಕು ಎಂದು ಹೇಳುವವರು ಆರ್ ಎಸ್ ಎಸ್ ನವರು. ದೇಶ ಭಕ್ತಿಯ ಭಾವನೆ ತುಂಬುವವರು ಆರ್ ಎಸ್ ಎಸ್ ನವರು. ಕಾಂಗ್ರೆಸ್ ನವರು ಏನು? ಆರ್ ಎಸ್ ಎಸ್ ನವರು ಈ ದೇಶದವರಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಮೊದಲು ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು.
ನೆಹರೂ, ಮೋದಿ ಹೋಲಿಕೆ ಬಗ್ಗೆ ಮಾತನಾಡಿದ್ದಾರೆ ಸಿದ್ದರಾಮಯ್ಯ, ಪ್ರಧಾನಿ ಮೋದಿ ದೇಶದ ದೇಗುಲ ಪುನರುತ್ಥಾನಕ್ಕೆ ಬಂದ ವ್ಯಕ್ತಿ. ಮೋದಿಯವರು ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ತೆಗೆದರು. ಇಂತಹ ಒಂದೇ ಒಂದು ಪ್ರಯತ್ನ ನೆಹರೂ ಮಾಡಿಲ್ಲ. ಇದೇ ಮೋದಿ ನೆಹರೂ ಅವರಿಗೂ ಇರುವ ಆಕಾಶ-ಭೂಮಿ ಅಂತರ ಎಂದು ಹೇಳಿದ್ದಾರೆ.
ಆರ್.ಎಸ್.ಎಸ್.ನವರು ಮೂಲ ಭಾರತದವರೇ? ಚರ್ಚೆಗೆ ಕಾರಣವಾಯ್ತು ಸಿದ್ದರಾಮಯ್ಯ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ