ಬೆಳಗಾವಿಯಲ್ಲಿ ರಾಮದೇವ ಗಲ್ಲಿ ಸೇರಿ 2-3 ದೇವಸ್ಥಾನಗಳನ್ನು ಪರಿವರ್ತಿಸಿ ಮಸೀದಿ ಮಾಡಲಾಗಿದೆ: ಅವುಗಳನ್ನು ಮರಳಿ ಪಡೆಯಬೇಕು – ಶಾಸಕ ಅಭಯ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ರಾಮದೇವ ಗಲ್ಲಿಯಲ್ಲಿರುವ ಮಸೀದಿ ಮೊದಲು ಹಿಂದೂ ದೇವಾಲಯವಾಗಿತ್ತು. ಅದನ್ನು ಸುಮಾರು 100 ವರ್ಷಗಳ ಹಿಂದೆ ಮಸೀದಿಯಾಗಿ ಪರಿವರ್ತಿಸಲಾಗಿದೆ. ಅದನ್ನು ಮರಳಿ ಹಿಂದೂಗಳಿಗೆ ಕೊಡಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಮಾತನಾಡಿದ ಅವರು, ಕಟ್ಟಡದಲ್ಲಿ ದೇವಸ್ಥಾನದ ವಾಸ್ತುಶಿಲ್ಪವನ್ನು ಸ್ಪಷ್ಟವಾಗಿ ಕಾಣಬಹುದು. ಅದರ ಬಾಗಿಲುಗಳು ಹಿಂದೂ ದೇವಸ್ಥಾನದ ಬಾಗಿಲಿನಂತೆ ಇದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಮದೇವ ಗಲ್ಲಿಯ ಹನುಮಾನ್ ಮಂದಿರದ ಪಕ್ಕದಲ್ಲಿ ಈ ಮಸೀದಿ ಇದೆ. ನಾನು ಹೊರಗಿನಿಂದ ನೋಡಿ ಬಂದಿದ್ದೇನೆ. ಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಇನ್ನು 2 -3 ದಿನದಲ್ಲಿ ಸ್ಪಷ್ಟವಾದ ಮಾಹಿತಿ ಸಿಗಲಿದೆ. ಮೇಲ್ನೋಟಕ್ಕೆ ದೇವಸ್ಥಾನವನ್ನು ಪರಿವರ್ತಿಸಿರುವುದು ಸ್ಪಷ್ಟವಾಗಿದೆ. ಸರ್ವೇ ಮಾಡಲಿ. ಆಗ ಸಂಪೂರ್ಣ ಗೊತ್ತಾಗುತ್ತದೆ ಎಂದು ಅಭಯ ಪಾಟೀಲ ತಿಳಿಸಿದರು.
ಬಹಳ ಪುರಾತನ ಮಂದಿರವನ್ನು 100 ವರ್ಷಗಳ ಹಿಂದೆ ಮಸೀದಿ ಮಾಡಲಾಗಿದೆ. ಅದರ ಬಾಗಿಲನ್ನು ನೋಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಿಂದುಗಳ ದೇವಸ್ಥಾನದಲ್ಲಿ ಬಾಗಿ ಒಳಗೆ ಹೋಗುವ ರೀತಿಯಲ್ಲಿ ಬಾಗಿಲು ಇರುತ್ತದೆ. ಒಳಗಡೆ ಹಲವಾರು ಚಿತ್ರಗಳಿದ್ದವು. ಅವುಗಳನ್ನು ತೆಗೆದಿರಬಹುದು. ಬೆಳಗಾವಿಯಲ್ಲಿ ಇನ್ನೂ 2 -3 ದೇವಸ್ಥಾನಗಳನ್ನು ಪರಿವರ್ತಿಸಿರುವುದು ನನ್ನ ಗಮನಕ್ಕೆ ಬಂದಿದೆ ಎಂದೂ ಅವರು ಹೇಳಿದರು.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಾರದೊಳಗೆ ನಿರ್ಣಯ ತೆಗೆದುಕೊಳ್ಳಲು ಆಗ್ರಹಿಸಲಾಗುವುದು. ಇಲ್ಲವಾದಲ್ಲಿ ಸಮಾಜದ ಮುಖಂಡರೊಂದಿಗೆ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬೆಳಗಾವಿಗೂ ಕಾಲಿಟ್ಟ ಮಂದಿರ-ಮಸೀದಿ ವಿವಾದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ