Latest

ಯುಪಿಎಸ್ ಸಿಯಲ್ಲಿ ಆಯ್ಕೆ ಎಂದು ಸನ್ಮಾನ; ಆಯ್ಕೆಯಾಗಿಲ್ಲ, ಕ್ಷಮಿಸಿ ಬಿಡಿ ಎಂದ ಯುವತಿ

ಪ್ರಗತಿವಾಹಿನಿ ಸುದ್ದಿ; ರಾಮಗಢ: ಇತ್ತೀಚೆಗೆ ಪ್ರಕಟವಾದ ಯುಪಿಎಸ್ ಸಿ ಫಲಿತಾಂಶದಲ್ಲಿ ತಾನೂ ಕೂಡ ಆಯ್ಕೆಯಾಗಿದ್ದೇನೆ ಎಂದೇ ಭಾವಿಸಿದ್ದ ಯುವತಿಗೆ ಸಂಘ-ಸಂಸ್ಥೆಗಳು, ಜಿಲ್ಲಾಡಳಿತ ಸನ್ಮಾನ ಸಮಾರಂಭ ಏರ್ಪಡಿಸಿದ್ದು, ಈ ವೇಳೆ ಯುವತಿ ಸತ್ಯ ಸಂಗತಿಯನ್ನು ಬಹಿರಂಗ ಪಡಿಸಿದ ಘಟನೆ ಜಾರ್ಖಂಡ್ ನ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.

ನಾಗರಿಕ ಸೇವಾ ಪರೀಕ್ಷೆಯಲ್ಲಿ ತಾನು ಉತ್ತೀರ್ಣಳಾಗಿದ್ದೇನೆ ಎಂದು ಭಾವಿಸಿದ್ದ 24 ವರ್ಷದ ದಿವ್ಯಾ ಪಾಂಡೆ ಬಗ್ಗೆ ಭಾರಿ ಸುದ್ದಿಯಾಗಿತ್ತು. ಮಗಳು ಯುಪಿಎಸ್ ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾಳೆ ಎಂದು ಕುಟುಂಬದಲ್ಲಿ ಸಂಭ್ರಮ. ಜಿಲ್ಲೆಯಾದ್ಯಂತ ಆಕೆಯ ಸಾಧನೆ ಬಗ್ಗೆಯೇ ಮಾತು. ಆದರೆ ದಿವ್ಯಾ ಪಾಂಡೆ ಇದೀಗ ತಾನು ಯುಪಿಎಸ್ ಸಿಯಲ್ಲಿ ಆಯ್ಕೆಯಾಗಿಲ್ಲ, ನನ್ನನ್ನು ಕ್ಷಮಿಸಿ ಬಿಡಿ ಎಂದಿದ್ದಾಳೆ.

ದಿವ್ಯಾ ಪಾಂಡೆ ಹಾಗೂ ಅವರ ಕುಟುಂಬವನ್ನು ಸನ್ಮಾನಿಸಿದ್ದ ರಾಮಗಢ ಜಿಲ್ಲಾಡಳಿತ ಹಾಗೂ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ ಮಾಹಿತಿ ತಪ್ಪಿನಿಂದ ಇಂತಹ ಅವಾಂತರವಾಗಿದೆ, ಕ್ಷಮಿಸಿ ಎಂದು ದಿವ್ಯಾ ಹಾಗೂ ಕುಟುಂಬವನ್ನು ಕ್ಷಮೆಯಾಚಿಸಿದೆ.

ಯುಪಿಎಸ್ ಸಿಯಲ್ಲಿ 323ನೇ ರ್ಯಾಂಕ್ ಗಳಿಸುವ ಮೂಲಕ ಆಯ್ಕೆಯಾಗಿದ್ದು ದಕ್ಷಿಣ ಭಾರತ ಮೂಲದ ದಿವ್ಯಾ.ಪಿ ಎಂಬ ಯುವತಿ. ಒಂದೇ ರೀತಿಯ ಹೆಸರು, ಮಾಹಿತಿ ತಪ್ಪಿನಿಂದಾಗಿ ದಿವ್ಯಾ ಪಾಂಡೆ ತಾನೇ ಆಯ್ಕೆಯಾಗಿದ್ದಾಗಿ ತಿಳಿದಿದ್ದಳು. ಅವಳ ಗೆಳತಿ ಫಲಿತಾಂಶ ನೋಡಿ ಫೋನ್ ಮಾಡಿ ಅಭಿನಂದನೆ ಹೇಳಿದ್ದೇ ಈ ಅವಾಂತರಕ್ಕೆ ಕಾರಣ.

ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾರನ್ನು ಪಕ್ಷದಿಂದ ಉಚ್ಛಾಟಿಸಿದ BJP

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button