Kannada NewsLatest

ಬೆಳಗಾವಿ: ಹೆಡ್ಗೆವಾರ್ ಬಗ್ಗೆ ಓದಿದರೆ ಕಾಂಗ್ರೆಸ್ ನವರೂ ಬಿಜೆಪಿಗೆ ಬರ್ತಾರೆ; ಕೈ ನಾಯಕರಿಗೆ ಟಾಂಗ್ ನೀಡಿದ ಸಚಿವ ಮುರುಗೇಶ್ ನಿರಾಣಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಪಕ್ಷದಿಂದ ಚಡ್ಡಿ ಸುಡುವ ಅಭಿಯಾನ ವಿಚಾರವಾಗಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸೇವೆ ಇದೆ. ಆರ್.ಎಸ್.ಎಸ್ ಬಗ್ಗೆ ಮಾತನಾಡುವುದು ಸರಿಯಲ್ಲ. ಆರ್.ಎಸ್.ಎಸ್ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಎಂಎಲ್ ಸಿ, ಎಂಪಿ, ಸಿಎಂ ಆಗಬೇಕು ಎಂದು ಕನಸು ಕಂಡವರಲ್ಲ ಆರ್.ಎಸ್.ಎಸ್ ನವರು. ಅನ್ಯಾಯಕ್ಕೊಳಗಾದ ಜನರ ಜತೆ ಆರ್.ಎಸ್.ಎಸ್ ಸದಾ ನಿಲ್ಲುತ್ತದೆ. ಹಾಗಾಗಿ ಕಾಂಗ್ರೆಸ್ ನಾಯಕರಿಗೆ ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.

Home add -Advt

ಆರ್.ಎಸ್.ಎಸ್ ಬಗ್ಗೆ ಅಭ್ಯಾಸ ಮಾಡಿದರೆ ಕಾಂಗ್ರೆಸ್ ನವರಿಗೂ ಮನಸ್ಸು ಪರಿವರ್ತನೆಯಾಗುತ್ತದೆ. ಕಾಂಗ್ರೆಸ್ ನವರು ಹೆಡ್ಗೆವಾರ್ ಬಗ್ಗೆ ಮಾತನಾಡುತ್ತಿದ್ದಾರೆ. ಹೆಡ್ಗೆವಾರ್ ಬಗ್ಗೆ ಓದಿದರೆ ಕಾಂಗ್ರೆಸ್ ನವರೂ ಬಿಜೆಪಿಗೆ ಬರ್ತಾರೆ ಎಂದು ಹೇಳಿದರು.

ಹಿಜಾಬ್ ವಿವಾದ; 24 ವಿದ್ಯಾರ್ಥಿನಿಯರಿಗೆ ನಿರ್ಬಂಧ

Related Articles

Back to top button