Kannada NewsKarnataka NewsLatest

15 ವರ್ಷದ ನಂತರ ಕೈಗೆ ಬಂತು ಲೇಬರ್ ಕಾರ್ಡ್ : ದಾಮಣೆ ಜನರ ಮುಖದಲ್ಲಿ ಸಂತಸ ಮೂಡಿಸಿದ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನರೇಗಾ ಯೋಜನೆ ಜಾರಿಯಾಗಿ 15 ವರ್ಷವಾದರೂ ಸೌಲಭ್ಯದಿಂದ ವಂಚಿತರಾಗಿದ್ದ ದಾಮಣೆ ಗ್ರಾಮದ ಜನರಿಗೆ ಲೇಬರ್ ಕಾರ್ಡ್ ಒದಗಿಸುವ ಮೂಲಕ ಅವರ ಮುಖದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಂತಸ ಮೂಡಿಸಿದ್ದಾರೆ.
ಬೆಳಗಾವಿ ಗ್ರಾಮೀಣ ​ಕ್ಷೇತ್ರದ ಬೆಳವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಧಾಮಣೆ ಗ್ರಾಮದ ಜನರು ಕೆಲಸವಿಲ್ಲದೆ ತಮ್ಮ ಜೀವನ ಸಾಗಿಸಲಿಕ್ಕೆ ತೊಂದರೆಗಳನ್ನು ಅನುಭವಿಸುತ್ತಿದ್ದರು. ಈ ವಿಷಯ ​ ಗಮನಕ್ಕೆ ಬಂದ ತಕ್ಷಣ ಗ್ರಾಮ ಪಂಚಾಯತಿ ಅಭಿವೃದ್ಧಿಯ ಅಧಿಕಾರಿ ಹಾಗೂ ನರೇಗಾ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ​ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್,​ ತ್ವರಿತಗತಿಯಲ್ಲಿ ಈ ಜನರಿಗೆ ಲೇಬರ್ ಕಾರ್ಡ್ ಗಳನ್ನು ಮಾಡಿಸಿ, ಕೆಲಸವನ್ನು ಕೊಡಿಸಿ​ದರು. ಜೊತೆಗೆ ಅವರೆಲ್ಲರ ಆರೋಗ್ಯದ ದೃಷ್ಟಿಯಿಂದ ಮೆಡಿಕಲ್ ಫರ್ಸ್ಟ್ ಏಡ್ ಕಿಟ್ ಗಳನ್ನು​ ಸಹ​ ​ವ್ಯವಸ್ಥೆ ಮಾಡಿ,  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ ಮತ್ತು ಸಿಬ್ಬಂದಿ ಮೂಲಕ ವಿತರಿಸಲು ವ್ಯವಸ್ಥೆ ಮಾಡಿದರು.
​ ನರೇಗಾ ಯೋಜನೆ 2007ರಲ್ಲಿ ಪ್ರಾರಂಭವಾಗಿ​ದ್ದರೂ​​ ​ ಈ ಹಿಂದಿನ ಶಾಸಕರು ಈ ಗ್ರಾಮದ ಬಗ್ಗೆಯಾಗಲಿ, ಜನರ ಸಮಸ್ಯೆಗಳ​ ಬಗ್ಗೆಯಾಗಲಿ ತಲೆಕೆಡಿಸಿಕೊಂಡಿರಲಿಲ್ಲ.ಈ ವಿಷಯ ಗಮನಕ್ಕೆ ಬಂದ ತಕ್ಷಣ ಅವರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸವನ್ನು ಕಲ್ಪಿಸಿಕೊಟ್ಟು ಅವರ ಮುಖದಲ್ಲಿ ಮಂದಹಾಸ ತರುವುದರಲ್ಲಿ ​ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button