ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಳೆ ನಡೆಯಲಿರುವ ರಾಜ್ಯಸಭಾ ಚುನಾವಣೆ ಅಖಾಡ ರೋಚಕ ಘಟ್ಟ ತಲುಪಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರ ಕಾದಾಟಕ್ಕೆ ವೇದಿಕೆಯಾಗಿದೆ. ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಾಡಿದ ಮನವಿಗೆ ಕಾಂಗ್ರೆಸ್ ಒಪ್ಪಿಲ್ಲ. ಬದಲಾಗಿ ಜೆಡಿಎಸ್ ಶಾಸಕರೇ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ವಿಪಕ್ಷ ನಾಯಕ ಸಿದ್ದರಾಮಯ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದು, ಪತ್ರ ಬಹಿರಂಗವಾಗಿದೆ. ಜಾತ್ಯಾತೀತ ಜನತಾದಳ ಶಾಸಕರೇ ಕೋಮುವಾದಿ, ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಹೀಗಾಗಿ ಕಾಂಗ್ರೆಸ್ ನ ಎರಡನೇ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
37 ಶಾಸಕರನ್ನು ಹೊಂದಿದ್ದ ಜೆಡಿಎಸ್ ಗೆ ಬೆಂಬಲ ನೀಡಿ ಸಿಎಂ ಮಾಡಿದ್ದೆವು. ಹೆಚ್.ಡಿ.ಕುಮಾರಸ್ವಾಮಿಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ದೇವೇಗೌಡರು ಪ್ರಧಾನಿ ಮಾಡಲು ಸಹಕರಿಸಿದೆವು. ಈಗ ಕೋಮುವಾದಿ, ಜಾತಿವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ಮತ ನೀಡುವಂತೆ ಕೇಳಿದ್ದಾರೆ.
ಜೆಡಿಎಸ್ ಶಾಸಕರಿಗೆ ಪತ್ರ ಬರೆದ ವಿಚಾರವಾಗಿ ಕಿಡಿ ಕಾರಿರುವ ಕುಮಾರಸ್ವಾಮಿ, ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುವಂತೆ ಮನವಿ ಮಾಡಿದೆವು. ಸೋನಿಯಾ ಗಾಂಧಿ ಅವರೊಂಗೂ ಚರ್ಚೆ ನಡೆಸಲಾಗಿತ್ತು. ಆದರೆ ರಾಜ್ಯದ ನಾಯಕರು ಚರ್ಚೆಗೆ ಬರದೇ ಆತ್ಮಸಾಕ್ಷಿ ಹೇಳಿಕೆ ಕೊಟ್ಟರು. ಜೆಡಿಎಸ್ ನ ಕೆಲ ಆತ್ಮಸಾಕ್ಷಿ ವೋಟ್ ಗಳು ಕಾಂಗ್ರೆಸ್ ಗೆ ಬರಲಿವೆ ಎಂದರು. ಈಗ ಸಿದ್ದರಾಮಯ್ಯ ನಮ್ಮ ಶಾಸಕರಿಗೆ ಪತ್ರ ಬರೆದು ವ್ಯಾಪಾರಿ ರಾಜಕಾರಣ ಮಾಡುತ್ತಿದ್ದಾರೆ. ಅಂದು ಬಿಜೆಪಿ ಬಿ ಟೀಂ ಎಂದು ಮೊನ್ನೆ ಆತ್ಮಸಾಕ್ಷಿ ಮಾತನಾಡಿ ಈಗ ಜೆಡಿಎಸ್ ಶಾಸಕರಿಗೆ ಪತ್ರ ಬರೆಯಲು ನಾಚಿಕಾಯಾಗಬೇಕು ಸಿದ್ದರಾಮಯ್ಯನವರಿಗೆ. ಇದೇನಾ ನಿಮ್ಮ ಆತ್ಮಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ನಿಗೆ ಕಿರುಕುಳ; PSI ಪತಿ ವಿರುದ್ಧ ಎಫ್ ಐ ಆರ್ ದಾಖಲು; ಹೆಂಡತಿ ವಿರುದ್ಧವೂ ದೂರು ದಾಖಲಿಸಿದ ಪೊಲೀಸ್ ಅಧಿಕಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ