
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಲೌಕಿಕ ಧ್ಯಾನಮಂದಿರ ನಿಲಜಿಯಲ್ಲಿ ಇಂದು ಹೋಮ ಪೂಜಾ ಕಾರ್ಯಕ್ರಮ ಮತ್ತು ಪೂಜ್ಯ ಗುರುಗಳ ಮೊದಲ ಪಾಠದೊಂದಿಗೆ ಸದ್ವಿದ್ಯಾ ಗುರುಕುಲಕ್ಕೆ ಚಾಲನೆ ನೀಡಲಾಯಿತು.
ಅಲೌಕಿಕ ಧ್ಯಾನಮಂದಿರದ ಪೂಜ್ಯರಾದ ಶಿವಾನಂದ್ ಗುರೂಜಿ ಪ್ರಾಸ್ತಾವಿಕವಾಗಿ ಗುರುಕುಲದ ಮಹತ್ವವನ್ನು ತಿಳಿಸಿಕೊಟ್ಟರು. ಗುರುಕುಲದಲ್ಲಿ ಧರ್ಮ-ಸಂಸ್ಕೃತಿ, ವೇದ ವಿಜ್ಞಾನ, ಕೃಷಿ, ಶೌರ್ಯ, ಶ್ರೇಷ್ಠ ಸಮಾಜದ ನಿರ್ಮಾಣವೇ ಗುರುಕುಲದ ಮುಖ್ಯ ಧ್ಯೇಯವಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಮಾನಸಿಕ ಭಾವನಾತ್ಮಕ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಎನ್ನುವ ಈ ಸಮಗ್ರ ಪಂಚತತ್ವಗಳ ಆಧಾರದ ಮೇಲೆ ಗುರುಕುಲ ನಡೆಯುತ್ತದೆ ಎಂದು ಪೂಜ್ಯರು ಮಾರ್ಮಿಕವಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಆಚಾರ್ಯ ವಿದ್ವಾನ್ ರಾಮಚಂದ್ರ ಭಟ್ ಇವರು ದಕ್ಷಿಣ ಭಾರತೀಯ ಗುರುಕುಲಗಳ ಪ್ರಮುಖರಾಗಿರುತ್ತಾರೆ. ಇವರು ಹಾಗೂ ಆಚಾರ್ಯ ವಿದ್ವಾನ್ ಮಹಾಬಲೇಶ್ವರ ಭಟ್ ಇವರು ಈ ಗುರುಕುಲಕ್ಕೆ ಮಾರ್ಗದರ್ಶಕರಾಗಿ ಇರುತ್ತಾರೆ. ರಾಮಚಂದ್ರ ಭಟ್ ಇವರು ದೇಶ-ವಿದೇಶಗಳ ಗುರುಕುಲ ಗಳನ್ನು ಗಮನಿಸುತ್ತಾರೆ.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಗುರುಸಿದ್ಧ ಮಹಾಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಪರಮಪೂಜ್ಯ ಅಡವಿಸಿದ್ದೇಶ್ವರ ಮಹಾಸ್ವಾಮೀಜಿ ಅಂಕಲಗಿ ಉಪಸ್ಥಿತಿ ಇದ್ದು ಸದ್ವಿದ್ಯಾ ಗುರುಕುಲ ಈ ಭಾಗದಲ್ಲಿ ಧರ್ಮದ ಕೆಲಸಕ್ಕೆ ನಾಂದಿ ಹಾಡಿದೆ ಎಂದು ಹೇಳಿದರು.
ಜಗದ್ಗುರು ಶಿವಲಿಂಗೇಶ್ವರ ಮಹಾಸ್ವಾಮೀಜಿ ಸಿದ್ಧ ಸಂಸ್ಥಾನ ಮಠ ನಿಡಸೋಶಿ ಪೂಜ್ಯರ ಆಶೀರ್ವಾದದಲ್ಲಿ ಈ ಸದ್ವಿದ್ಯಾ ಗುರುಕುಲ ನಡೆಯುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಾಂತ್ ಕದಂ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯರು ಕೃಷ್ಣ ಭಟ್, ಪರಮೇಶ್ವರ ಹೆಗಡೆ, ದಿಲೀಪ್ ವೆರ್ಣೇಕರ್, ರಾಮಚಂದ್ರ ಅಡಕೆ, ವಿನಾಯಕ ಜೋಶಿ, ಎಸ್ಎಂ ಕಲೂತಿ, ವಿಜಯ ಜಾಧವ್, ಬಸವರಾಜ್ ನಿಂಬಾಳ, ಬಸವರಾಜ್ ಬಾಗೋಜಿ ಉಪಸ್ಥಿತರಿದ್ದರು.
ಸಂದೇಶ ವಾಚನ ಶಾಂತಿ ಮಂತ್ರ ಬಸವರಾಜ್ ಹಳಿಂಗಳಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಿಲಜಿ ಗ್ರಾಮದ ಮಾತೆಯರು, ಪ್ರಮುಖರು ಭಾಗವಹಿಸಿದರು. ಮೈತ್ರೇಯಿ ಗುರುಕುಲ ಹರಿಹರಪುರ ಗುರುಕುಲ, ಚನ್ನೇನಹಳ್ಳಿಯ ವೇದ ವಿಜ್ಞಾನದ ಗುರುಕುಲದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶೈಕ್ಷಣಿಕ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಬಿಜೆಪಿ ಬೆಂಬಲಿಸಿ; ಸಂಸದ ಅಣ್ಣಾಸಾಹೇಬ ಜೊಲ್ಲೆ ಕರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ