ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಲಂಚ ಪಡೆಯುತ್ತಿದ್ದಾಗ ಕಾನ್ಸ್ ಟೇಬಲ್ ಓರ್ವರು ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರ್ಗಿ ನಗರದ ಬ್ರಹ್ಮಪುರ ಠಾಣೆಯಲ್ಲಿ ನಡೆದಿದೆ.
ಭೀಮ ನಾಯ್ಕ್ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ. ಸೈಟ್ ವಿಚಾರವಾಗಿ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಅಬ್ದುಲ್ ಮುಸ್ತಫಾ ಎಂಬುವವರ ವಿರುದ್ಧ ಕೆಲವರು ದೂರು ನೀಡಿದ್ದರು. ಅಬ್ದುಲ್ ಮುಸ್ತಫಾ ಅವರನ್ನು ಠಾಣೆಗೆ ಕರೆಸಿ ಕಾನ್ಸ್ ಟೇಬಲ್ ಭೀಮ ನಾಯ್ಕ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಬ್ದುಲ್ ಮುಸ್ತಫಾ ಅವರಿಗೆ ಕಾನ್ಸ್ ಟೇಬಲ್ 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಬ್ದುಲ್ ಎಸಿಬಿಗೆ ದೂರು ನೀಡಿದ್ದರು. ಕಲಬುರ್ಗಿ ರೈಲ್ವೆ ನಿಲ್ದಾಣದ ಸಮೀಪದ ಹೋಟೆಲ್ ಬಳಿ 30 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾನ್ಸ್ ಟೇಬಲ್ ಭೀಮ ನಾಯ್ಕ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಬಂಧಿಸಲಾಗಿದೆ.
ಶಾಸಕ ಹೆಚ್.ಡಿ.ರೇವಣ್ಣಗೆ ಕ್ಲೀನ್ ಚಿಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ