ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇದೀಗ ಪಿಎಸ್ ಐ ಓರ್ವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಹರೀಶ್ ಬಂಧಿತ ಆರೋಪಿ. ಪಿಎಸ್ ಐ ಆಗಿ ಇದ್ದುಕೊಂಡೇ ಪರೀಕ್ಷಾ ಅಕ್ರಮದಲ್ಲಿ ಹರೀಶ್ ಭಾಗಿಯಾಗಿದ್ದರು.
2019ರ ಬ್ಯಾಚ್ ನಲ್ಲಿ ಪಿಎಸ್ ಐ ಆಗಿದ್ದ ಆರೋಪಿ ಹರೀಶ್, ಪಿಎಸ್ ಐ ನೇಮಕಾತಿಯಲ್ಲಿ ಅಭ್ಯರ್ಥಿ ಹಾಗೂ ನೇಮಕಾತಿ ವಿಭಾಗದ ಮಧ್ಯವರ್ತಿಯಾಗಿದ್ದರು. ನೇಮಕಾತಿ ವಿಭಾಗದ ಆರ್ ಎಸ್ ಐ ಜತೆ ನಿಕಟ ಸಂಪರ್ಕ ಹೊಂದಿದ್ದರು. ಇದೀಗ ಹರೀಶ್ ನನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಕೆಎಸ್ ಆರ್ ಟಿಸಿ ಬಸ್-ಲಾರಿ ನಡುವೆ ಡಿಕ್ಕಿ; 14 ಪ್ರಯಾಣಿಕರಿಗೆ ಗಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ