Karnataka NewsLatest

ದಾಖಲೆ ನಿರ್ಮಿಸಿದ ಹೊರಟ್ಟಿ ಸಚಿವರಾಗ್ತಾರಾ? ಪುನಃ ಸಭಾಪತಿಯಾಗ್ತಾರಾ?

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತ 8ನೇ ಬಾರಿಗೆ ಆಯ್ಕೆಯಾಗುವ ಮೂಲಕ ದೇಶದಲ್ಲೇ ಹೊಸ ದಾಖಲೆ ಬರೆದಿರುವ ಬಸವರಾಜ ಹೊರಟ್ಟಿ ಮತ್ತೆ ಸಭಾಪತಿಯಾಗಲಿದ್ದಾರಾ ಅಥವಾ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುತ್ತಾರಾ?

ಬಸವರಾಜ ಹೊರಟ್ಟಿ ಮೊನ್ನೆ ಮೊನ್ನೆಯವರೆಗೂ ಸಭಾಪತಿಯಾಗಿದ್ದವರು. ಚುನಾವಣೆ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಮೊದಲಿನಿಂದಲೂ ಅವರು ಜನತಾ ಪರಿವಾರದಿಂದಲೇ ರಾಜಕೀಯ ಮಾಡಿದ್ದರು.

Home add -Advt

ಬಸವರಾಜ ಹೊರಟ್ಟಿ 2006 -07ರ ಸಮಯದಲ್ಲಿ ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು. ಆಗ ಹಲವಾರು ಕ್ರಾಂತಿಕಾರಕ ನಿರ್ಧಾರಗಳಿಂದಾಗಿ ಹೆಸರು ಮಾಡಿದ್ದರು.

ಕಳೆದ ಕಾಂಗ್ರೆಸ್ – ಜೆಡಿಎಸ್ ಸರಕಾರದಲ್ಲಿ ಅವರಿಗೆ ಸಚಿವಸ್ಥಾನ ನೀಡದೆ ಕಡೆಗಣಿಸಲಾಗಿತ್ತು. ಆಗಲೇ ಅವರು ತೀವ್ರ ಅಸಮಾಧಾನಗೊಂಡಿದ್ದರು.

ಈಗ ಅವರನ್ನು ಬಿಜೆಪಿ ಸಚಿವರನ್ನಾಗಿ ಮಾಡುತ್ತೋ ಅಥವಾ ಸಭಾಪತಿ ಸ್ಥಾನದಲ್ಲೇ ಮುಂದುವರಿಸುತ್ತೋ ಎನ್ನುವ ಕುತೂಹಲ ಮೂಡಿದೆ. ಶಿಕ್ಷಣ ಇಲಾಖೆ ಹೊರಟ್ಟಿ ಅವರ ಪ್ರಿಯವಾದ ಇಲಾಖೆ. ಕಳೆದ ಕೆಲವು ತಿಂಗಳಿನಿಂದ ಶಿಕ್ಷಣ ಇಲಾಖೆ ಭಾರಿ ವಿವಾದಕ್ಕೊಳಗಾಗಿದೆ. ಹಾಗಾಗಿ ಅದನ್ನು ಸರಿಮಾಡುವ ದೃಷ್ಟಿಯಿಂದ ಹೊರಟ್ಟಿ ಅವರಿಗೆ ಶಿಕ್ಷಣ ಇಲಾಖೆಯನ್ನು ನೀಡಲಾಗುತ್ತದೆಯೇ?

ಶಿಕ್ಷಣ ಕ್ಷೇತ್ರದಿಂದಲೇ ಆಯ್ಕೆಯಾಗುತ್ತ ಬಂದಿರುವ ಹೊರಟ್ಟಿ ಅಲ್ಲಿನ ಒಳ ಹೊರಗನ್ನು ಇಂಚಿಂಚೂ ಅರಿತಿದ್ದಾರೆ. ಆದರೆ ಸಧ್ಯ ಆರ್ ಎಸ್ಎಸ್ ಮೂಲದ ಬಿ.ಸಿ.ನಾಗೇಶ್ ಕೈಯಲ್ಲಿರುವ ಶಿಕ್ಷಣ ಇಲಾಖೆಯನ್ನು ಹೊರಟ್ಟಿಗೆ ಕೊಡುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಸಭಾಪತಿ ಸ್ಥಾನದಲ್ಲೇ ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ.

ಹೊರಟ್ಟಿ ಗೆಲುವು ಬಹುತೇಕ ಖಚಿತ: ಅಧಿಕೃತ ಘೋಷಣೆ ಬಾಕಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button