ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವದಲ್ಲಿ ಗೋಕಾಕದ ಯೋಗಗುರು ಬ್ರಹ್ಮಾನಂದ ಸ್ವಾಮಿಗಳಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗದೀಕ್ಷೆಯನ್ನು ನೀಡಿ ವೀರಶೈವ ಪದ್ಧತಿಗೆ ಅನುಸಾರವಾಗಿ ಅವರಿಗೆ ಧರ್ಮ ಸಂಸ್ಕಾರವನ್ನು ನೀಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡುತ್ತ, ವೀರಶೈವ ಧರ್ಮದಲ್ಲಿ ತತ್ವಗಳ ತ್ರಿಪುಟೆ ಇದೆ. ಅಷ್ಟಾವರಣ, ಪಂಚಾಚಾರ, ಷಟಸ್ಥಳಗಳು ಇವುಗಳನ್ನು ಅನುಸರಿಸಿ ಎಲ್ಲರು ಕೂಡ ನಡೆಯಬಹುದಾಗಿದೆ. ಲಿಂಗದೀಕ್ಷೆ ಅದು ಜಾತಿಯ ಕುರುಹು ಅಲ್ಲ. ಲಿಂಗದೀಕ್ಷೆ ಎಲ್ಲರೂ ಪಡೆದುಕೊಳ್ಳಬಹುದು. ಲಿಂಗಪೂಜೆ ಅದು ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಪಂಚ ಸೂತ್ರದ ಪಂಚಸೂತ್ರ ಪೀಠಕದ ಮೇಲೆ ಲಿಂಗಕ್ಕೆ ಕಾಂತಿಯನ್ನು ಇಡಲಾಗುತ್ತದೆ. ಆ ಕಾಂತಿಯಲ್ಲಿ ತುಪ್ಪದ ದೀಪದಿಂದ ಬಂದಿರುವ ಕಾಡಿಗೆಯನ್ನು ಕರ್ಪೂರ ದೀಪದಿಂದ ಬಂದಿರುವ ಕಾಡಿಗೆಯನ್ನು ಬಳಸಿ ಲಿಂಗಕ್ಕೆ ಲೇಪನ ಮಾಡಲಾಗುತ್ತದೆ. ನಿತ್ಯ ಲಿಂಗವನ್ನ ಅರೆಗಣ್ಣಿನಿಂದ ನೋಡಿದ್ದೆ ಆಯ್ತು ಅಂದರೆ, ದೃಷ್ಟಿ ದೋಷ ಬರುವುದಿಲ್ಲ ಎಂದರು.
ಲಿಂಗದ ವಿಚಾರ ಅದ್ಭುತವಾಗಿ ಇರುವಂತದ್ದು ಅದಕ್ಕಾಗಿ “ಲಿಂಗ ಮಧ್ಯೆ ಜಗತ್ ಸರ್ವಂ” ಎಂಬ ಮಾತನ್ನು ನಾವು ಕೇಳುತ್ತೇವೆ. ಲಿಂಗ ಪೂಜೆ ತ್ರೀ ಕಾಲದಲ್ಲಿ ಮಾಡಿದರೆ ಅವನು ನಿರೋಗಿ ಆಗುತ್ತಾನೆ. ಅವನಲ್ಲಿ ಒಂದು ಅದ್ಭುತವಾದ ಶಕ್ತಿ ಬರುತ್ತದೆ. ಅದಕ್ಕಾಗಿ ಲಿಂಗಪೂಜೆ ಮಾಡುವುದನ್ನು ಎಲ್ಲರೂ ಕಲಿಯುವ ಅವಶ್ಯಕತೆ ಇದೆ. ಪ್ರಣಯ ಪಂಚಾಕ್ಷರಿ ಮಹಾಮಂತ್ರವೂ ಕೂಡ ತುಂಬಾ ಶ್ರೇಷ್ಠವಾಗಿರುವಂತದ್ದು. ಅದನ್ನು ನಿತ್ಯ ಪಠಿಸಿದರೆ ಅವನಿಗೆ ಶಾಂತಿ ಸಮಾಧಾನ ಲಭಿಸುತ್ತದೆ ಎಂದು ಶ್ರೀಗಳು ಹೇಳಿದರು.
ಲಿಂಗದೀಕ್ಷೆಯನ್ನು ಸ್ವೀಕರಿಸಿರುವ ಯೋಗಗುರು ಬ್ರಹ್ಮಾನಂದರು ಮಾತನಾಡಿ, ನಾನು ಇಷ್ಟು ದಿನ ಪಾರ್ಚ ಲಿಂಗವನ್ನು ಪೂಜೆ ಮಾಡುತ್ತಿದ್ದೆ, ಆದರೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕಾಂತಿಯ ಲಿಂಗವನ್ನೆ ಪೂಜಿಸುವುದು ತುಂಬಾ ಯೋಗ್ಯ, ಇದು ಯೋಗದಲ್ಲಿಯೂ ಕೂಡ ವಿಶೇಷವಾಗಿ ಇರುವಂತಹ ಸ್ಥಾನವನ್ನು ಪಡೆದಿದೆ ಎಂದು ಅರುಹಿ ನಮಗೆ ಲಿಂಗದಾಕ್ಷೆಯನ್ನು ನೀಡಿದ್ದಾರೆ. ಇವತ್ತು ಷಟಸ್ಥಲ ಬ್ರಹ್ಮಿಗಳು ಅಂದರೆ 6 ಸ್ಥಲಗಳನ್ನು ಅರಿತು ಆಚರಿಸಿ ಲಿಂಗದೀಕ್ಷೆಯನ್ನು ಅನುಗ್ರಹಿಸುವವರು ಷಟಸ್ಥಲ ಬ್ರಹ್ಮಿಗಳು. ಗ್ರಾಮೀಣ ಭಾಗದಲ್ಲಿ ಅವರಿಗೆ ಪಟ್ಟದ ದೇವರು ಎಂಬ ಪದವು ಕೂಡ ಇದೆ. ಅಂತಹ ಗುರುಗಳು ಲಿಂಗದಿಕ್ಷೆಯನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಬ್ಯಾಂಕಿನ ಉಪಾಧ್ಯಕ್ಷರಾದ ಬೀರಪ್ಪ ಗಡದವರ ಉಪಸ್ಥಿತರಿದ್ದರು. ವೇದಮೂರ್ತಿ ಸಂಪತ್ಕುಮಾರ್ ಶಾಸ್ತ್ರಿಗಳು ವೈಧಿಕತ್ವವನ್ನು ನೆರವೇರಿಸಿದರು. ಹುಕ್ಕೇರಿ ಹಿರೇಮಠದ ಒಂದ ನೂರ ಎಂಟು ಗುರುಕುಲ ವಿದ್ಯಾರ್ಥಿಗಳು ಈ ಲಿಂಗ ದೀಕ್ಷೆ ಯನ್ನು ಸಾಕ್ಷಿಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ