ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಹುನಿರೀಕ್ಷಿತ ಕೃಷಿ ಉಡಾನ್ ಯೋಜನೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮಂಜೂರಾಗಿದೆ.
ಬೆಳಗಾವಿ ಸೇರಿದಂತೆ 5 ವಿಮಾನ ನಿಲ್ದಾಣಗಳನ್ನು ಕೃಷಿ ಉಡಾನ್ ಗೆ ಸೇರ್ಪಡೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ದೇಶದಲ್ಲಿ ಕೃಷಿ ಉಡಾನ್ ಗಳನ್ನು ಹೊಂದಿರುವ ವಿಮಾನ ನಿಲ್ದಾಣಗಳ ಸಂಖ್ಯೆ 58ಕ್ಕೇರಿದೆ.
ಕೃಷಿ ಉತ್ಪನ್ನಗಳ ಮೌಲ್ಯ ವೃದ್ಧಿಸಲು ಕೃಷಿ ಉಡಾನ್ ಸಹಾಯಕವಾಗಲಿದ್ದು, ಕೃಷಿ ಆರ್ಥಿಕತೆ ಬೆಳೆಸಲು, ತ್ವರಿತವಾಗಿ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸಾಗಿಸಲು ಕೃಷಿ ಉಡಾನ್ ನೆರವಾಗಲಿದೆ.
ಬೆಳಗಾವಿ ಮಟ್ಟಿಗೆ ಕೃಷಿ ಉಡಾನ್ ಈ ಭಾಗದ ಅಭಿವೃದ್ಧಿಗೆ ವರವಾಗಲಿದೆ.
ಜೊಲ್ಲೆ ಮನವಿ ಮಾಡಿದ್ದರು (
ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಲು ಭಾರತ ಸರ್ಕಾರವು ಘೋಷಿಸಿರುವ ‘ಕೃಷಿ ಉಡಾನ್ 2.0’ ಯೋಜನೆಯಡಿ ಮೊದಲ ಹಂತದಲ್ಲಿ ಹುಬ್ಬಳ್ಳಿ ಮತ್ತು ಮೈಸೂರು ವಿಮಾನ ನಿಲ್ದಾಣಗಳನ್ನು ಸೇರಿಸಲಾಗಿತ್ತು. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಹಾಗೂ ಗಡಿ ಭಾಗದ ಕೃಷಿಕರಿಗೆ ಅನುಕೂಲವಾಗುವಂತೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸಹ ಸೇರಿಸುವಂತೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಂಸತ್ತಿನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಮನವಿ ಮಾಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸದರಿ ಯೋಜನೆಯ ಅನುಷ್ಠಾನದ ಮೌಲ್ಯಮಾಪನವನ್ನು ನಿಯಮಿತವಾಗಿ ಮಾಡಲಾಗುತ್ತಿದ್ದು, ಸ್ವೀಕರಿಸಿದ ಫಲಿತಾಂಶಗಳು ಮತ್ತು ಕೃಷಿ ಉತ್ಪನ್ನಗಳ ರಫ್ತಿನ ಪ್ರಮಾಣಗಳನ್ನು ಪರಿಗಣಿಸಿ ಬೆಳಗಾವಿ ವಿಮಾನ ನಿಲ್ದಾಣವನ್ನು ಸಹ “ಕೃಷಿ ಉಡಾನ್” ಯೋಜನೆ ಅಡಿ ಸೇರಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಆದೇಶದ ಪ್ರತಿ ಇಲ್ಲಿದೆ –
OM 27.06.22 on Krishi Udan 2.0 updated airports
https://pragati.taskdun.com/latest/mp-anna-saheba-jolleudan-project-2-0belagavi-airport/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ