ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣದ ಎ1 ಆರೋಪಿ ಜಾಗೃತ್ ನನ್ನು ಚನ್ನಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಾಗೃತ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಕೇರಳ, ಚೆನ್ನಪಟ್ಟಣ ಸೇರಿದಂತೆ ಹಲವೆಡೆ ತಲೆಮರೆಸಿಕೊಂಡಿದ್ದ. ಪ್ರಕರಣದ ಬಳಿಕ ನಡೆದ ಪ್ರತಿಭಟನೆಯ ಮುಂದಾಳತ್ವವನ್ನೂ ಜಾಗೃತ್ ವಹಿಸಿಕೊಂಡಿದ್ದ.
ಅಲ್ಲದೇ ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಬಳಿಕ ರಾಜ್ಯ ಸರ್ಕಾರ ಪರೀಕ್ಷಾ ನೇಮಕಾತಿ ರದ್ದು ಮಾಡಿತ್ತು. ಸರ್ಕಾರದ ಈ ಕ್ರಮ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಗೆ ಜಾಗೃತ್ ಮನವಿ ಮಾಡಿದ್ದ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸಮುದ್ರಕ್ಕೆ ನುಗ್ಗಿದ ಕಾರು; ಓರ್ವ ದುರ್ಮರಣ
ಮಕ್ಕಳ ಗುಪ್ತಾಂಗ ಅಳೆದು ವಿಡಿಯೋ ಹರಿಬಿಟ್ಟ ವಿಕೃತ ಟೀಚರ್; ಕಾಮುಕ ಶಿಕ್ಷಕ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ