Kannada NewsKarnataka NewsLatest

ಶ್ರೀ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗೆ ಗೌರವ ಸಮರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ‌ನಗರಕ್ಕೆ ಶ್ರೀ ಕೇದಾರ ಜಗದ್ಗುರು, ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಬುಧವಾರ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಕೇದಾರ ಜಗದ್ಗುರುಗಳನ್ನು ಗೌರವಿಸಿ ಜಗದ್ಗುರುಗಳ ಕಾರ್ಯದ ಬಗ್ಗೆ ಅಭಿಮಾನದಿಂದ ಗುರುಗೌರವವನ್ನು ಸಮರ್ಪಿಸಿದರು.

Home add -Advt

ಆಶೀರ್ವಾದ ಮಾಡಿ ಮಾತನಾಡಿದ ಕೇದಾರ ಜಗದ್ಗುರುಗಳು, ಬೆಳಗಾವಿ ನಗರದಲ್ಲಿ ಗುರುವಿರಕ್ತರು ಸೇರಿ ನಮಗೆ ಗೌರವಿಸಿದ್ದು ಸಂತಸ ತಂದಿದೆ . ಇನ್ನೂ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಕಾರ್ಯವನ್ನು ಈ ಭಾಗದಲ್ಲಿ ಉಭಯ ಸ್ವಾಮೀಜಿಗಳು ಮಾಡಲಿ ಎಂದು ಆಶೀರ್ವದಿಸಿದರು.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಕೇದಾರ ಜಗದ್ಗುರುಗಳಿಗೂ ನಮಗೂ ಹಲವು ವರ್ಷಗಳಿಂದ ನಿಕಟ ಸಂಪರ್ಕವಿದೆ. ಇವತ್ತು ಕೇದಾರ ಪೀಠದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇದಾರ ಜಗದ್ಗುರುಗಳು ಬೆಳಗಾವಿಗೆ ಪಂಚಾಕ್ಷರಿ ಹಿರೇಮಠ ಅವರ ಮನೆಗೆ ಬಂದಿರುವುದು ಸಂತಸದ ಸಂಗತಿ. ಅವರಿಂದ ಬೆಳಗಾವಿ ನಗರದ ಜನತೆಗೆ ದರ್ಶನ ಲಭಿಸಿದಂತಾಗಿದೆ. ಕೇದಾರ ಜಗದ್ಗುರುಗಳ ಕಾರ್ಯ ಅನುಪಮ. ಗಂಗಾಧರ ಜಗದ್ಗುರುಗಳ ನಂತರದಲ್ಲಿ ವೈಭವ ಪೂಜೆಯನ್ನು ನೋಡಬೇಕೆಂದರೆ ಕೇದಾರ ಜಗದ್ಗುರುಗಳನ್ನು ನೋಡಬಹುದು ಎಂದರು.

ಕಣ್ವಕುಪ್ಪೆ ಮಠದ ಡಾ. ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಎಂದರೆ ನಂದಿ ಇದ್ದ ಹಾಗೆ. ಅವರು ಎಲ್ಲಾ ಗುರುಗಳಿಗೂ ವಿಶೇಷ ಗೌರವ ಸಲ್ಲಿಸುತ್ತಾ ತಮ್ಮ ಶ್ರದ್ಧೆ ಮೆರೆದಿದ್ದಾರೆ ಎಂದರು.

ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಲ್ಪಸಂಖ್ಯಾತ ನಿಮಗ ಮಂಡಳಿ ಅಧ್ಯಕ್ಷ ಮುಕ್ತಾರ ಪಠಾಣ, ಮಹಾಂತೇಶ ಹಿರೇಮಠ, ಪಂಚಾಕ್ಷರಿ ಹಿರೇಮಠ, ವಿಜಯ ಶಾಸ್ತ್ರೀ ಉದೋಶಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬದಲಾಗಲಿದ್ದಾರಾ ಶಿಕ್ಷಣ ಸಚಿವರು; ಬಸವರಾಜ್ ಹೊರಟ್ಟಿ ಹೇಳಿದ್ದೇನು?

Related Articles

Back to top button