ಬೆಳಗಾವಿ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಬೆಳೆ ಹಾನಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಪ್ರಸ್ತುತ ಹಿಗಾರು ಮತ್ತು ಮುಂಗಾರು ಬೆಳೆ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ತೇವಾಂಶದ ಕೊರತೆಯಿದ 70 ಸಾವಿರ ಹೆಕ್ಟೇರ್ ಕಬ್ಬು ಬೆಳೆ ಸೇರಿದಂತೆ ಒಟ್ಟೂ 2,99,700 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶನಿವಾರ ಬೆಳಗಾವಿಗೆ ಬಂದ ಸಂದರ್ಭದಲ್ಲಿ ಜಿಲ್ಲಾಡಳಿತ ಅವರ ಮುಂದೆ ಈ ಕುರಿತ ವಿವರ ವರದಿಯನ್ನು ಮಂಡಡಿಸಿದ್ದು, ಸರಕಾರದ ಸಹಾಯ ಮತ್ತು ಮಾರ್ಗದರ್ಶನ ಕೋರಿದೆ.
ಮುಂಗಾರು ಹಂಗಾಮಿನ ತೇವಾಂಶದ ಕೊರತೆಯಿಂದ 80,548 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 58.49 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಕೇವಲ 5.55 ಕೋಟಿ ರೂ. ಮಾತ್ರ ಪರಿಹಾರ ರೈತರ ಖಾತೆಗೆ ಜಮಾ ಆಗಿದೆ. ಹಿಂಗಾರು ಹಂಗಾಮಿನಲ್ಲಿ 1,49,116 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 84.56 ಕೋಟಿ ರೂ. ಪರಿಹಾರ ಕೇಳಲಾಗಿದೆ. ಆದರೆ ಈವರೆಗೆ ನಯಾ ಪೈಸೆ ಕೂಡ ಬಂದಿಲ್ಲ. ಇನ್ನು 70 ಸಾವಿರ ಹೆಕ್ಟೇರ್ ಕಬ್ಬಿನ ಬೆಳೆ ಕೂಡ ತೇವಾಂಶದ ಕೊರತೆಯಿಂದ ಹಾನಿಗೊಳಗಾಗಿದೆ.
ಒಟ್ಟಾರೆ 143.05 ಕೋಟಿ ರೂ. ಪರಿಹಾರ ಒದಗಿಸುವಂತೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದ್ದರೆ ಬಂದಿದ್ದು, ಕೇವಲ5.5 ಕೋಟಿ ರೂ.!
ಕುಡಿಯುವ ನೀರಿನ ಸಲುವಾಗಿ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಬಿಡುಗಡೆ ಮಾಡಿಸುವಂತೆ ಜಿಲ್ಲಾಡಳಿತ ಸಚಿವರ ಮುಂದೆ ಬೇಡಿಕೊಂಡಿದೆ. ಜಾನುವಾರ ಮೇವಿಗಾಗಿ 38,003 ಮಿನಿ ಕಿಟ್ ಗಳನ್ನು ಪೂರೈಸುವಂತೆ ಸಹ ಸರಕಾರವನ್ನು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ