Kannada NewsLatest

ಅಸಾಮಾನ್ಯವಾದುದನ್ನು ಸಾಧಿಸಿದವರಿಂದ ಮಾತ್ರ ಇತಿಹಾಸ ನಿರ್ಮಾಣ ಸಾಧ್ಯ: ಉಪನ್ಯಾಸಕ, ಚಿಂತಕ ವೀರೇಶ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಅಥಣಿ: ಯಾರು ಸಾಧಿಸುತ್ತಾರೋ ಅವರನ್ನು ಸಮಾಜ ಎಲ್ಲಿದ್ದರೂ ಗೌರವಿಸುತ್ತದೆ. ಯಾರೂ ಮಾಡಲಾರದ ಕೆಲಸ ಯಾರು ಮಾಡುತ್ತಾರೋ ಅವರು ಇತಿಹಾಸ ನಿರ್ಮಾಣ ಮಾಡುತ್ತಾರೆ. ಅಂತವರಿಗೆ ಸನ್ಮಾನ ಸಿಕ್ಕೇ ಸಿಗುತ್ತದೆ ಎಂದು ಉಪನ್ಯಾಸಕ, ಚಿಂತಕ ವೀರೇಶ ಪಾಟೀಲ ಹೇಳಿದರು.

ಅವರು ಸ್ಥಳೀಯ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಆದಿಬಣಜಿಗ ಯುವ ವೇದಿಕೆ ಅಥಣಿ ವತಿಯಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ 5ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಯಾರು ತಮ್ಮ ಗುಂಪಿನಲ್ಲಿ ಇತರರು ಮಾಡಲಾರದ ಕೆಲಸ ಮಾಡುತ್ತಾರೋ ಅವರು ಸಾಧಕರು. ಯಾವ ವಿದ್ಯಾರ್ಥಿಗೆ ಅವಶ್ಯಕತೆ ಇರುತ್ತದೆಯೋ ಅಂತವರನ್ನು ಮೇಲೆತ್ತುವ ಕೆಲಸ ಇಲ್ಲಿ ಯುವ ವೇದಿಕೆ ವತಿಯಿಂದ ನಡೆಯುತ್ತಿದೆ, ತಂದೆ ತಾಯಿಗಳ‌‌ ಕಷ್ಟ ಕಾರ್ಪಣ್ಯಕ್ಕೆ ಹೆಗಲಾಗಿ ಸಂಸಾರದ ಕಣ್ಣಾಗುತ್ತಾರೋ ಅವರು ನಿಜವಾದ ಮಕ್ಕಳು. ಅಂತಹ ಮಾದರಿ ಮಕ್ಕಳನ್ನು‌‌ ನಿರ್ಮಾಣ ಮಾಡುವುದೇ ನಮ್ಮ ಸಮಾಜದ ನಿಜವಾದ ಗುರಿಯಾಗಿರಬೇಕು ಎಂದರು. ಸಾಧನೆ ಯಾರೊಬ್ಬರ ಸ್ವತ್ತಲ್ಲ, ಸಾಧಿಸಬೇಕೆಂದು ಛಲದಿಂದ ಕೆಲಸ ನಿರ್ವಹಿಸುವವರೇ ನಿಜವಾದ ಸಾಧಕರಾಗುತ್ತಾರೆ ಎಂದು ಅವರು ಹೇಳಿದರು.

ಯುವ ಮುಖಂಡ ಬಸವಪ್ರಸಾದ ಜೊಲ್ಲೆ ಮಾತನಾಡಿ,  ಇದೊಂದು ಮಾದರಿ ಸಮಾರಂಭ. ಉತ್ತಮ ಶಿಕ್ಷಣದಿಂದ ಮಾತ್ರ ಗಟ್ಟಿ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯ, ಇವರ ಈ ಮಹತ್ತರ ಕಾರ್ಯದಲ್ಲಿ ನಮ್ಮ ಜೊಲ್ಲೆ ಪರಿವಾರ ಸದಾಕಾಲ ಜೊತೆಯಾಗಿರುತ್ತದೆ ಎಂದು ಹೇಳಿದರು.

ಅದ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಬಳ್ಳೊಳ್ಳಿ ಮಾತನಾಡಿ, ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕಿಂತ ಹೆಚ್ಚು ನಾವು ಸಮಾಜಕ್ಕೆ ಏನು ಮಾಡಿದ್ದೇವೆ  ಎಂಬುದು ಮುಖ್ಯವಾಗ ಬೇಕೆಂದರು. ಸಮಾಜದ ಇನ್ನು ಹಲವಾರು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರ ಇರುವದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಅಂತಹವರನ್ನು ಗೌರವಿಸುವ ಕಾರ್ಯ ಸಮಾಜ ಮುಂದೆ ಮಾಡಲಿದೆ ಎಂದರು.

ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸುರೇಶ ಬಳ್ಳೊಳ್ಳಿ ಪ್ರಾಸ್ತಾವಿಕ ಮಾತನಾಡಿದರು,

ಹೆಚ್ಚಿನ ಅಂಕ ಗಳಿಸಿದ ಅಮೃತಾ ಚಿದಾನಂದ ಸಂಕೇಶ್ವರ ಅವರಿಗೆ ಸನ್ಮಾನ

ಅನಂತರ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ಸಿ.ಎಸ್. ನೇಮಗೌಡ, ರಾಜೇಂದ್ರ ತೋರಿ, ಶಿವಾನಂದ ಮಾರಾಪುರೆ, ಪ್ರಶಾಂತ ಅಪರಾಜ, ಗೀತಾ ತೋರಿ, ರೂಪಾ ವಳಸಂಗ, ರಾಜಶ್ರಿ ಒಣಜೋಳ, ಯಶೋದಾ ಕರೋಲಿ ಬಸವರಾಜ ಬಿರಾದಾರ, ಅಪ್ಪು ಪಾಟೀಲ, ಮಹಾದೇವ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಬಹುಮೂಲ್ಯ; ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button