Latest

ಮೊದಲ ಸುತ್ತಿನಲ್ಲಿ ರಿಷಿ ಸುನಕ್ ಭಾರಿ ಮುನ್ನಡೆ

 ಲಂಡನ್ – ಇನ್ಫೋಸಿಸ್ ಸಂಸ್ಥಾಪಕಾರ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಅಳಿಯ, ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಮಂತ್ರಿ ಸ್ಥಾನದ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ಭಾರಿ ಮುನ್ನಡೆಯಲ್ಲಿದ್ದಾರೆ.

88 ಮತ ಪಡೆಯುವ ಮೂಲಕ ರಿಷಿ ಮೊದಲ ಸ್ಥಾನದಲ್ಲಿದ್ದಾರೆ.  2ನೇ ಸ್ಥಾನದಲ್ಲಿ 67 ಮತ ಪಡೆದಿರುವ ಪೆನ್ನಿ ಮೊರಡಂಟ್ ಹಾಗೂ 3ನೇ ಸ್ಥಾನದಲ್ಲಿ 50 ಮತ ಪಡೆದಿರುವ ಟ್ರಸ್ ಲಿಜ್ ಇದ್ದಾರೆ. ಇನ್ನಿಬ್ಬರು ಮಾಜಿ ಸಚಿವರು ಸ್ಫರ್ಧೆಯಿಂದ ಎಲಿಮಿನೇಟ್ ಆಗಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಯುಕೆ ಮಾಜಿ ಚಾನ್ಸೆಲರ್ ರಿಷಿ ಸುನಕ್(Rishi Sunak) ಅವರು ಮೊದಲ ಸುತ್ತಿನ ಮತದಾನದಲ್ಲಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಹಾಗೂ ಯುಕೆ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗುವ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.

Related Articles

Back to top button