Kannada NewsKarnataka NewsLatest

ಸಂಕೇಶ್ವರ: ಆಕಸ್ಮಿಕ ಅಗ್ನಿ ಅವಘಡ: ಎರಡು ಅಂಗಡಿಗಳು ಭಸ್ಮ

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ: ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ  ಸಂಭವಿಸಿದ ಅಗ್ನಿ ಅವಘಡದಲ್ಲಿ ಪಎರಡು ಅಂಗಡಿಗಳು ಸುಟ್ಟುಹೋಗಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

ನೆಹರು ರಸ್ತೆಯಲ್ಲಿರುವ  ಕಿರಾಣಿ ಅಂಗಡಿಯಲ್ಲಿ  ಪಟಾಕಿ ಕೂಡ ಇತ್ತೆನ್ನಲಾಗಿದೆ. ಈ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಭುಗಿಲೆದ್ದು ಪಕ್ಕದ  ಕಾಳುಕಡಿ ಮಾರಾಟದ ಅಂಗಡಿಗೂ ಆವರಿಸಿದ ಪರಿಣಾಮ ಎರಡೂ ಅಂಗಡಿಗಳಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

Home add -Advt

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಇನ್ನೂ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.

ಕಪಿಲಾ ನದಿಯಲ್ಲಿ ಈಜಲು ಜಿಗಿದ ಹುಡುಗರು; ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಯುವಕ

Related Articles

Back to top button