ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗ್ರಾಮೀಣ ಜನತೆಯ ವಿದ್ಯುತ್ ಸಮಸ್ಯೆಯ ತಕ್ಷಣ ಪರಿಹಾರಕ್ಕಾಗಿ ಇಂಧನ ಇಲಾಖೆ ಹುವಿಸಕಂನಿ / ಹೆಸ್ಕಾಂ ಮುಂದಾಗಿದ್ದು ಪ್ರತಿ ತಿಂಗಳ ಮೂರನೇ ಶನಿವಾರ ಬೆಳಗಾವಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಸುವ ಕಾರ್ಯಕ್ರಮವನ್ನು ಜುಲೈ ೧೬ ರಂದು ಬೆಳಿಗ್ಗೆ ೧೧ ಘಂಟೆಗೆ ಬೆಳಗಾವಿ ವೃತ್ತ ವ್ಯಾಪ್ತಿಯಲ್ಲಿ ಆಯ್ದ ಸ್ಥಳಗಳಲ್ಲಿ ನಡೆಸಲಾಗುವುದು. ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷಿಯ ಜನ ಸ್ನೇಹಿ ಯೊಜನೆಗಳಲ್ಲಿ ಇದು ಒಂದಾಗಿದೆ.
ಬೆಳಗಾವಿ ವೃತ್ತ ವ್ಯಾಪ್ತಿಯ ಬೆಳಗಾವಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕಲ್ಲಾರಕೊಪ್ಪ, ದೆವಗೇರಿ, ಬೆಕ್ಕಿನಕಟ್ಟಿ, ಕರಳೆ, ಕಲಕಾಂಬ, ಅವಚಾರಟ್ಟಿ, ಮಣ್ಣೂರ ಮತ್ತು ಹೊನಗಾ,
ಖಾನಾಪೂರ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಗೊಲಿಹಳ್ಳಿ, ಬೆಡರಹಟ್ಟಿ, ಹಲಕಣ , ಹೆಬ್ಬಾಳಹಟ್ಟಿ ಮತ್ತು ಕುಪಟಗಿರಿ,
ಬೈಲಹೊಂಗಲ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕುರಗುಂದ, ಹಣಮಾನಹಟ್ಟಿ, ಲಿಂಗದಳ್ಳಿ, ಜಕ್ಕನಾಯಕನಕೊಪ್ಪ,
ಕಿತ್ತೂರು ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಚಿಕ್ಕನಂದಿಹಳ್ಳಿ, ಸವದತ್ತಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಹಿರೇಬುದನೂರ, ಕುರವಿನಕೊಪ್ಪ, ಹರಳಿಕಟ್ಟಿ, ಬೆನಕಟ್ಟಿ ಮತ್ತು ಕಲ್ಲಾಪೂರ,
ರಾಮದುರ್ಗ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕೆ-ತಿಮ್ಮಾಪೂರ, ಚಿಕ್ಕಮೂಲಂಗಿ, ಮುದೇನೂರ ಮತ್ತು ಸರ್ವಾಪೂರ
ಗೋಕಾಕ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಮಲ್ಲಾಪೂರ-ಪಿಜಿ, ದಂಡಾಪುರ ಮತ್ತು ಕೈತನಾಳ,
ಮೂಡಲಗಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕವರಟ್ಟಿ, ಮುಸುಗುಪ್ಪಿ, ಹೊಸಯರಗುದ್ರಿ ಮತ್ತು ಮುನ್ಯಾಳ,
ಸದರಿ ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಬೆಳಗಾವಿ ಹೆಸ್ಕಾಂ ಕಾರ್ಯ ಮತ್ತು ಪಆಲನಾ ವೃತ್ತದ ಅಧೀಕ್ಷಕ ಅಭೀಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಹಾಗೂ ಖಾನಾಪುರ ತಾಲೂಕಿನ ಶಾಲೆಗಳಿಗೆ 2 ದಿನ ರಜೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ