ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ನ್ಯೂ ಗಾಂಧಿನಗರ ಬಳಿ ರೈಲ್ವೆ ಟ್ರ್ಯಾಕ್ ನಲ್ಲಿ ತಾಯಿ, ಮಗನ ಶವ ಪತ್ತೆಯಾಗಿದ್ದು, ಕೊಲೆಯೋ, ಆತ್ಮಹತ್ಯೆಯೋ ತನಿಖೆ ನಡೆದಿದೆ.
ಮೂಲತ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಕರಗೊಪ್ಪಿ ಗ್ರಾಮದ ಲಕ್ಷ್ಮಣ ಗೂಟಗೊಡ್ಡಿ (8) ರೇಣುಕಾ ಗೂಟಗೊಡ್ಡಿ (35) ಸಾವಿಗೀಡಾದವರು.
ರೇಲ್ವೆ ಹಳಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಸಂಶಯ ಒಂದೆಡೆ ಇದ್ದರೂ, ಕೊಲೆ ಮಾಡಿ ಎಸೆದಿರಬಹುದೆನ್ನುವ ಶಂಕೆಯೂ ಇದೆ.
ಇಂದು ಬೆಳಗಿನ ಜಾವ ಘಟನೆ ನಡೆದಿದೆ.
ಸ್ಥಳಕ್ಕೆ ಮಾಳಮಾರುತಿ ಪೋಲಿಸರು ಹಾಗೂ ರೈಲ್ವೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.


