ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಕ್ಷೇತ್ರದ ಖನಗಾಂವ ಬಿ ಕೆ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಮಂದಿರದ ನೂತನ ಕಟ್ಟಡ ನಿರ್ಮಾಣದ ಸಲುವಾಗಿ 25 ಲಕ್ಷ ರೂ. ಗಳ ಮಂಜೂರಾಗಿದ್ದು, ದೇವಸ್ಥಾನದ ಕಟ್ಟಡ ನಿರ್ಮಾಣದ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜಾಗೃತ ಶಕ್ತಿಯ ಸ್ಥಳವಾಗಿರುವ ಖನಗಾಂವ ಬಿಕೆ ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಕುರಿತ ಶ್ರದ್ಧಾಳುಗಳ ಬೇಡಿಕೆ ಮನ್ನಿಸಿ 25 ಲಕ್ಷ ರೂ. ಅನುದಾನ ನೀಡಲಾಗಿದೆ. ಭವ್ಯ ದೇಗುಲ ನಿರ್ಮಾಣವಾಗುವ ಮೂಲಕ ಇದೊಂದು ಅಭಿವೃದ್ಧಿಯುತ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆಯಾಗಲಿ ಅದಕ್ಕೆ ತಮ್ಮೆಲ್ಲ ಸಹಕಾರ ನೀಡಲು ಬದ್ಧ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಟ್ರಸ್ಟ್ ಕಮೀಟಿಯವರು, ಮಹೇಶ ಸುಗ್ಗೆಣ್ಣವರ, ಬಸವರಾಜ ಬೆಕ್ಕಿನಕೇರಿ, ಲಕ್ಷ್ಮೀ ಬಗನಾಳ, ತುಕಾರಾಂ ದಿಂಡಲಕುಂಪಿ, ರಾಜಾಅಲಿಸಾಬ್ ಜಮಾದಾರ, ರುಕ್ಮಿಣಿ ಹೊಸಮನಿ, ದೊಡ್ಡಲಗಮಣ್ಣ ಚಚಡಿ, ಕರೆಪ್ಪ ಹೊಸಮನಿ, ಸದೆಪ್ಪ ಬಂಗೆಣ್ಣವರ, ಬಸಪ್ಪ ಚಚಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಗಾಯಕ ಸಿಧು ಹತ್ಯೆ ಪ್ರಕರಣ; ಇಬ್ಬರು ಪ್ರಮುಖ ಆರೋಪಿಗಳ ಎನ್ ಕೌಂಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ