Latest

ಕವರ್ ಸಮೇತ ಚಾಕಲೇಟ್ ತಿಂದ ಬಾಲಕಿ; ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಪುಟ್ಟ ಬಾಲಕಿಯೊಬ್ಬಳು ಕವರ್ ಸಮೇತ ಚಾಕಲೇಟ್ ತಿಂದು, ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.

6 ವರ್ಷದ ಸಮನ್ವಿ ಮೃತ ಬಾಲಕಿ. ಸಮನ್ವಿ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ.

Home add -Advt

ಇಂದು ಬೆಳಿಗ್ಗೆ ಬಾಲಕಿ ಸಮನ್ವಿ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿದ್ದಳು. ಇದಕ್ಕೆ ಅಮ್ಮ ಸಮಾಧಾನ ಮಾಡಿ ಚಾಕಲೇಟ್ ಕೊಟ್ಟು ಕಳುಹಿಸಿದ್ದರು. ಶಾಲೆಗೆ ಹೋಗಲೆಂದು ಶಾಲಾ ಬಸ್ ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದ ಬಾಲಕಿ ಕವರ್ ಸಮೇತ ಚಾಕಲೇಟ್ ತಿಂದಿದ್ದಾಳೆ. ಚಾಕಲೇಟ್ ಕವರ್ ಗಂಟಲಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದಾಳೆ.

ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಾಯಕ ಸಿಧು ಹತ್ಯೆ ಪ್ರಕರಣ; ಇಬ್ಬರು ಪ್ರಮುಖ ಆರೋಪಿಗಳ ಎನ್ ಕೌಂಟರ್

Related Articles

Back to top button