ಪ್ರಗತಿವಾಹಿನಿ ಸುದ್ದಿ, ಸಿದ್ದಾಪುರ: ಹಳ್ಳ ದಾಟುವಾಗ ಕಾಲುಜಾರಿ ಬಿದ್ದು ನೀರಿನಲ್ಲಿ ಮೃತಪಟ್ಟ ತಾರೇಸರದ ಪ್ರಸಿದ್ಧ ಮದ್ದಲೆ ವಾದಕ ಪರಮೇಶ್ವರ ಹೆಗಡೆ ಅವರ ಮನೆಗೆ ತೆರಳಿದ ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕೃತಿ ವಿಕೋಪದ ಅಡಿ 5 ಲಕ್ಷ ರೂ. ಮೊತ್ತದ ಚೆಕ್ಕನ್ನೂ ಹಸ್ತಾಂತರಿಸಿ ಸಾಂತ್ವನ ಹೇಳಿದರು.
ಅತಿವೃಷ್ಠಿಯಿಂದ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಮೃತರಾದ ಹೆಗ್ಗರಣಿ ಪಂಚಾಯಿತಿ ವ್ಯಾಪ್ತಿಯ ತಾರೇಸರ ಪರಮೇಶ್ವರ ಹೆಗಡೆ ಅವರು ಕಲಾವಿದರಿಗೆ, ಕಲಾಸಕ್ತರಿಗೆ ‘ಪರಮಣ್ಣ’ ಎಂದೇ ಹೆಸರಾಗಿದ್ದರು. ಅವರ ಅಕಾಲಿಕ ಸಾವು ಯಕ್ಷಗಾನ, ತಾಳಮದ್ದಲೆ ಕ್ಷೇತ್ರಕ್ಕೂ ನಷ್ಟ ಎಂದೂ ಕಾಗೇರಿ ಹೇಳಿದರು.
ಸರಕಾರ ಕೆಲಸ ಎಂದರೆ ವಿಳಂಬ ಎನ್ನುವ ವೇಳೆಗೆ ಕಲಾವಿದ ಪರಮೇಶ್ವರ ಹೆಗಡೆ ಅವರು ಆಕಸ್ಮಿಕವಾಗಿ ಅಗಲಿದ ನಾಲ್ಕೇ ದಿನದಲ್ಲಿ ಕಾಗೇರಿ ಅವರು ಭೇಟಿ ನೀಡಿ ಕುಟುಂಬದ ನೋವಿನಲ್ಲಿ ಭಾಗಿಯಾಗಿ ಸಾಂತ್ವನ ನುಡಿದರು. 5 ಲ.ರೂ. ಮೊತ್ತದ ಚೆಕ್ ನೀಡಿದ್ದೂ ಗಮನ ಸೆಳೆಯಿತು.
ಈ ವೇಳೆ ಸ್ಥಳೀಯ ಪ್ರಮುಖರು ಹಾಜರಿದ್ದರು.
ಮೇಕೆದಾಟು ಯೋಜನೆ ಅಂತಿಮ ತೀರ್ಪು ಮುಂದಿನ ವಾರದೊಳಗೆ ಹೊರಬೀಳುವ ಸಾಧ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ