ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ– ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಬೇಡಕಿಹಾಳದ ಮೋರೆ ಕುಟುಂಬಕ್ಕೆ ೫ ಲಕ್ಷ ಹಾಗೂ ಡೋಣೆವಾಡಿ ಭೆಂಡೆ ಕುಟುಂಬಕ್ಕೆ ಸಚಿವೆ ಶಶಿಕಲಾ ಜೊಲ್ಲೆ ೫ ಲಕ್ಷ ರೂಪಾಯಿಗಳ ಪರಿಹಾರ ಚೆಕ್ ವಿತರಣೆ ಮಾಡಿದರು.
ನಿಪ್ಪಾಣಿ ಮತಕ್ಷೆತ್ರದ ಬೇಡಕಿಹಾಳ ಗ್ರಾಮದ ಪ್ರಗತಿಪರ ರೈತ ಹೇಮಂತ್ ಮೋರೆ ಕೃಷಿ ಕಾರ್ಯ ಮಾಡುತ್ತಿರುವಾಗ ವಿದ್ಯುತ್ ತಂತಿ ತುಳಿದು ಮೃತ ಪಟ್ಟ ಘಟನೆ ಸಂಭವಿಸಿತ್ತು. ರೈತ ಕುಟುಂಬಕ್ಕೆ ಹೆಸ್ಕಾಂ ದಿಂದ ಮಂಜೂರಾದ ೫ ಲಕ್ಷ ರೂಪಾಯಿಗಳ ಪರಿಹಾರ ಧನ ನೀಡಲಾಯಿತು.
ಕಳೆದ ವಾರ ಡೋಣೆವಾಡಿ ಗ್ರಾಮದಲ್ಲಿ ೯ ವರ್ಷದ ಬಾಲಕಿ ಅನುಷ್ಕಾ ಭೆಂಡೆ ಪ್ರಾಥಮಿಕ ಶಾಲೆಯಲ್ಲಿ ಮೃತ ಪಟ್ಟಿದ್ದಳು. ಗುರುವಾರ ಅವರ ಮನೆಗೆ ಭೇಟಿ ನೀಡಿ ಅವರ ತಾಯಿಗೆ ಗೀತಾ ಸದಾಶಿವ ಭೆಂಡೆ ಅವರಿಗೆ ೫ ಲಕ್ಷ ರೂ ಮೊತ್ತದ ಚೆಕ ನ್ನು ನೀಡಲಾಯಿತು. ಮುಂದೆ ಶಿಕ್ಷಣ ಇಲಾಖೆಯಿಂದ ೧ ಲಕ್ಷ ಪರಿಹಾರದ ಚೆಕ್ ವಿತರಿಸಲಾಗುವುದು. ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮೋರೆ ಕುಟುಂಬದವರ ಹಾಗೂ ಭೆಂಡೆ ಅವರ ಮನೆಗೆ ಭೆಟ್ಟಿ ನೀಡಿದ ಸಚಿವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಇನ್ನು ಮುಂದೆಯೂ ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ನೀಡುತ್ತೇವೆಂದು ಭರವಸೆ ನೀಡಿ “ಅಪಘಾತ, ವಿದ್ಯುತ್ ಸ್ಪರ್ಶ, ಪ್ರವಾಹ, ಮನೆಕುಸಿತ, ಮುಂತಾದ ಅವಘಡದಿಂದ ಮೃತಪಟ್ಟ, ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲು ಜೊಲ್ಲೆ ಕುಟುಂಬ ಸದಾ ಸಿದ್ಧವಿದ್ದು ಸಂಕಷ್ಟಕ್ಕೀಡಾದ ಜನತೆಗೆ ಪರಿಹಾರ ಕೊಡಿಸುವಲ್ಲಿ ಹಿಂದೆ ಬೀಳದು ಎಂದರು
ಅವಘಡಕ್ಕೊಳಗಾದ ಕುಟುಂಬದವರು ನಮ್ಮ ಸಿಬ್ಬಂದಿಗೆ ಸಕಾಲಕ್ಕೆ ಮಾಹಿತಿ ನೀಡಿದರೆ ಆದಷ್ಟು ಬೇಗ ಪರಿಹಾರ ಕಲ್ಪಿಸುವಲ್ಲಿ ಸುಲಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಮಂಡಳಿ ಚಿಕ್ಕೋಡಿಯ ಸುಪರಿಮಟೆಂಡೆಂಟ್ ಇಂಜಿನಿಯರ್ ವೆಂಕಟೇಶ್, ಸದಲಗಾ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಜಯ ಸುಖಸಾರೆ, ಸೆಕ್ಷನ್ ಆಫೀಸರ್ ಸಂತಾನ ಪಿರೇರಾ, ಬಿ.ಇ.ಓ. ರೇವತಿ ಮಠದ ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ನಿಪ್ಪಾಣಿ ಗ್ರಾಮೀಣ ಅಧ್ಯಕ್ಷ ಪವನ್ ಪಾಟೀಲ, ಬಿಜೆಪಿ ಮುಖಂಡ ಆರ್.ಜಿ.ಡೋಮನೆ, ಸುನಿಲ್ ನಾರೆ, ವಿಲಾಸ ಥರಕಾರ, ಎಂ.ಬಿ.ಪಾಟೀಲ, ತಾತ್ಯಾಸಾಹೇಬ ಕೇಸ್ತೆ, ಬಾಳಾಸಾಹೇಬ ಶಿಂದೆ, ಗಳತಗಾ ಗ್ರಾಮ ಪಂಚಾಯಿತಿ ಸದಸ್ಯರಾದ ಮಿಥುನ ಪಾಟೀಲ, ಅಲಗೊಂಡ ಪಾಟೀಲ, ಹಾಗೂ ಸರ್ವ ಸದಸ್ಯರು ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
https://pragati.taskdun.com/politics-2/president-india-draupadimurmu-elected-delhi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ