Latest

ಸ್ನೇಹಿತೆಯ ಮನೆಗೆ ಹೋಗುವೆನೆಂದ ಯುವತಿ ಕಾಣೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲೂಕಿನ ದೇವಲತ್ತಿ ಗ್ರಾಮದ ಯುವತಿ ದೀಪಾ ಭೀಮಪ್ಪ ಕುರುಬರ (೨೦) ಇವರು ಕಳೆದ ಮೇ.೧೭ರಂದು ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದಾರೆ ಎಂದು ಯುವತಿಯ ತಂದೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಕಾಣೆಯಾದ ಯುವತಿ ಸಧೃಡ ಮೈಕಟ್ಟು, ಕೆಂಪು ಬಣ್ಣವನ್ನು ಹೊಂದಿದ್ದು, ಕನ್ನಡ, ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಖಾನಾಪುರ ಠಾಣೆಗೆ ದೂರವಾಣಿ ಸಂಖ್ಯೆ: ೦೮೩೩೬ ೨೨೨೩೩೩ ಅಥವಾ ಮೊಬೈಲ್ ೯೪೮೦೮೦೪೦೮೬ ಮೂಲಕ ಮಾಹಿತಿ ನೀಡಲು ಪಿ.ಎಸ್.ಐ ನಿಂಗನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button