ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಬೆಳಗಾವಿಗೆ ಕೆ.ತ್ಯಾಗರಾಜನ್ ನೂತನ್ ಪೊಲೀಸ್ ಕಮಿಷನರ್ ಆಗಿದ್ದಾರೆ.
ಬೆಂಗಳೂರಿನ ಆಡಳಿತ ವಭಾಗದ ಏಜಿಪಿ ಸೀಮಂತಕುಮಾರ ಸಿಂಗ್ ಅವರನ್ನು ಬೆಂಗಳೂರು ಕೇಂದ್ರ ವಲಯ ಐಜಿಪಿಯಾಗಿ ವರ್ಗಾಯಿಸಲಾಗಿದೆ. ಕೆ.ವಿ.ಶರತ್ ಚಂದ್ರ ಅವರನ್ನು ಕೇಂದ್ರ ವಲಯದಿಂದ ಆಡಳಿತ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷಾ ಅವರನ್ನು ಬೆಂಗಳೂರಿನ ಇನ್ಫಾರ್ಮೇಶನ್ ಆ್ಯಂಡ್ ಪಬ್ಲಿಕ್ ರಿಲೇಶನ್ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
ಕಾರ್ಕಳದ ಆ್ಯಂಟಿ ನಕ್ಸಲ್ ಫೋರ್ಸ್ ನ ವಿಕಾಸ್ ಕುಮಾರ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
ಬೆಂಗಳೂರಿನ ಇನ್ಫಾರ್ಮೇಶನ್ ಆ್ಯಂಡ್ ಪಬ್ಲಿಕ್ ರಿಲೇಶನ್ ನಿಂದ ಎಸ್.ಎನ್.ಸಿದ್ದರಾಮಪ್ಪ ಅವರನ್ನು ಸಿಐಡಿ ಮತ್ತು ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಬೆಳಗಾವಿ ಕಮಿಷನರ್ ಲೋಕೇಶ್ ಕುಮಾರ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಬೆಂಗಳೂರಿನ ಸಿಐಡಿ ಮತ್ತು ಆರ್ಥಿಕ ಅಪರಾಧ ವಿಭಾಗದಿಂದ ಕೆ.ತ್ಯಾಗರಾಜನ್ ಅವರನ್ನು ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
ಕೊಡಗು ಎಸ್ಪಿ ಸುಮನ್ ಪೆಣ್ಣೆಕರ್ ಅವರನ್ನು ಬೆಂಗಳೂರು ಸಿಎಆರ್ ಯುನಿಟ್ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.
ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ ಅವರನ್ನು ಬೆಂಗಳೂರಿನ ಇಂಟಲಿಜನ್ಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಬೆಂಗಳೂರಿನ ಸಿಎಆರ್ ವಿಭಾಗದಿಂದ ದಿವ್ಯಾ ಸಾರಾ ಥಾಮಸ್ ಅವರನ್ನು ಚಾಮರಾಜ ನಗರ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಹಕ್ಕಾಯ್ ಅಕ್ಷಯ್ ಮಚ್ಚಿಂದ್ರ ಅವರನ್ನು ಇಂಟಲಿಜೆನ್ಸ್ ವಿಭಾಗದಿಂದ ಚಿಕ್ಕಮಗಳೂರು ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಸಿಐಡಿ ಎಸ್ಪಿ ಕ್ಷಮಾ ಮಿಶ್ರಾ ಅವರನ್ನು ಕೊಡಗು ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಚಾಮರಾಜ ನಗರ ಎಸ್ಪಿ ಎಚ್.ಡಿ.ಆನಂದಕುಮಾರ ಅವರನ್ನು ಐಎಸ್ಡಿ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ