Kannada NewsKarnataka NewsNational

*ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ : ಕರ್ನಾಟಕ ಲೋಕಾಯುಕ್ತ ಕಲಬುರಗಿಯ ಎಸ್.ಪಿ .ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಪ್ರತ್ಯೇಕ ದಾಳಿ ನಡೆಸಲಾಗಿದ್ದು, ಕಲಬುರಗಿ ಜಿಲ್ಲಾ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿತ್ತಾಪುರದ ಲೋಕೋಪಯೋಗಿ ಇಲಾಖೆಯ JE ಖಾದಿರ್ ಪಟೇಲ್ ಎಂಬುವವರು ಲೋಕಾ ಬಲೆಗೆ ಬಿದ್ದಿದ್ದಾರೆ.

ಪೆಟ್ರೋಲ್‌ ಬಂಕ್‌ಗೆ NOC ನೀಡಲು 1 ಲಕ್ಷ ರೂಪಾಯಿ ಹಣ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಪರ್ ರಾವ್ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಹಾಗೂ ಲೋಕೋಪಯೋಗಿ, ಇಲಾಖೆಯ ಅಧಿಕಾರಿ ಖಾದಿರ್ ಕೂಡ 20 ಸಾವಿರ ಹಣ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಅಧಿಕಾರಿಗಳ ಕೈಗೆ ಲಾಕ್ ಆಗಿದ್ದು, ತನಿಖೆ ಮುಂದುವರಿದಿದೆ.

ಚಿತ್ತಾಪುರದ ರಾಜರಾಮಪ್ಪ ನಾಯಕ್ ಎಂಬುವವರು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಚೇರಿಯಲ್ಲಿ ಲಂಚ ಪಡೆಯುವಾಗಲೇ ಅಧಿಕಾರಿಗಳು ಲೋಕಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಪ್ರತ್ಯೇಕ ಎರಡು ದೂರುಗಳು ದಾಖಲಾಗಿವೆ.

Related Articles

Back to top button