Belagavi NewsBelgaum NewsKarnataka News

*ನ್ಯಾಯಾಲಯದಲ್ಲಿ ಒಂದಾದ ಜೋಡಿ*

ಪ್ರಗತಿವಾಹಿನಿ ಸುದ್ದಿ: ಕೆಟ್ಟ ಗಳಿಗೆಯೊಂದರಲ್ಲಿ ನಡೆದ ಘಟನೆಗೆ ಸಂಬಧಿಸಿದಂತೆ ದಾಖಲಾದ ಪ್ರಕರಣವನ್ನು  ರಾಜಿ ಸಂಧಾನ ಮೂಲಕ ಬಗೆ ಹರಿಸಿಕೊಳ್ಳುವದರಿಂದ  ಕಳೆದು ಹೋದ ಪ್ರೀತಿ ವಿಶ್ವಾಸ, ಸಮಯ ಮತ್ತು ತಾವು ನ್ಯಾಯಾಲಯಕ್ಕೆ ಸಂದಾಯ ಮಾಡಿದ ಹಣವನ್ನು ಮರಳಿ ಪಡೆದು ಕಕ್ಷೀದಾರರು ನೆಮ್ಮದಿ ಜೀವನ ನಡೆಸಬಹುದಾಗಿದೆ ಎಂದು ಹಿರಿಯ ಧಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು.

ಬೈಲಹೊಂಗಲ ಪಟ್ಟಣದ ನ್ಯಾಯಾಲಯಗಳ ಸಂಕಿರ್ಣದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್‌ದಲ್ಲಿ ಪ್ರಕರಣಗಳನ್ನು ಇತ್ಯಾರ್ಥಗೊಳಿಸಿ ಮಾತನಾಡಿ, ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣಗಳಿಗೆ ಕಕ್ಷಿದಾರರು ಪದೆ ಪದೆ ಬರುವದರಿಂದ ತಮ್ಮ ಅಮೂಲ್ಯವಾದ ಸಮಯ, ದುಡಿಮೆ ಹಾಗೂ ನ್ಯಾಯಾಲಯದ ಸಮಯ ವ್ಯರ್ಥವಾಗುವದಲ್ಲದೆ ತಮ್ಮ ಮಾನಸಿಕ ಸಮತೋಲನ ಕಳೆದುಕೊಳ್ಳುವದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದರು.

ನ್ಯಾಯಾಂಗ ಇಲಾಖೆ ನಿರ್ಧಿಷ್ಟ ಪಡಿಸಿದ ಕೆಲವೊಂದು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಕಾನೂನಿಡಿಯಲ್ಲಿ ಅವಕಾಶ ಕಲ್ಪಿಸಿದೆ ಇದನ್ನು ಕಕ್ಷೀದಾರರು ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ತ್ವರಿತ ಗತಿಯಲ್ಲಿ ಪ್ರಕರಣ ಇತ್ಯರ್ಥಗೊಳ್ಳಲು ಸಹಕಾರಿಯಾಗಲಿದೆ ಎಂದರು.

ಪ್ರಧಾನ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ ಮಾತನಾಡಿ, ನ್ಯಾಯಾಲಯದ ಸಂಕೀರ್ಣದಲ್ಲಿ ಅಪಘಾತ, ಆಸ್ತಿ ವಿವಾದ, ಹಣಕಾಸು ಹಾಗೂ ಸಣ್ಣಪುಟ್ಟ ಇತರೆ ಪ್ರಕರಣಗಳಲ್ಲಿ ಬಹುದಿನಗಳಿಂದ ಇತ್ಯಾರ್ಥವಾಗದೆ ಉಳಿದಿದ್ದು ಸುಮಾರು 931 ಪ್ರಕರಣಗಳನ್ನು ಉಭಯ ಪಕ್ಷಗಾರರು ಮತ್ತು ನ್ಯಾಯವಾದಿಗಳ ಸಮ್ಮುಖದಲ್ಲಿ ಪಕ್ಷಗಾರರಿಗೆ ಕಾನೂನಿನ ತಿಳುವಳಿಕೆ ನೀಡಿ ಇತ್ಯಾರ್ಥಗೊಳಿಸಿ ಅಪಘಾತ ಮತ್ತು   

ಪರಿಹಾರವಾಗಿ ಕಕ್ಷಿದಾರರಿಗೆ 2,56,97,391 ರೂಪಾಯಿ ಹಣ ನೀಡಲು ಆದೇಶ ಮಾಡಲಾಗಿದೆ ಎಂದರು.

ಮೂರು ಜೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು ನ್ಯಾಯಾಧೀಶರ ಸಮ್ಮುಖದಲ್ಲಿ ಮರು ದಾಂಪತ್ಯ  ಜೀವನಕ್ಕೆ ಕಾಲಿಟ್ಟರು. ಮಧ್ಯಸ್ಥಗಾರರಾಗಿ ವಕೀಲ ದುಂಡೇಶ ಗರಗದ, ಪುಜಾ ದುಮಾಳೆ ಕಾರ್ಯ ನಿರ್ವಹಿಸಿದರು 

ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘದ ಅಧ್ಯಕ್ಷ ಎಂ.ಆರ್.ಮೇಳವೆಂಕಿ, ಹಿರಿಯ ನ್ಯಾಯವಾದಿಗಳಾದ ಎಮ್.ವಾಯ್. ಸೊಮಣ್ಣವರ, ಬಿ,ಆರ್ ಅಲಸಂಧಿ,  ಆರ್.ಎ.ಪಾಟೀಲ, ಜಿ.ಬಿ.ಶಿಗಿಹಳ್ಳಿ,  ಎಂ.ಎಂ.ಸೊಪ್ಪಿನ, ಎಸ್.ಎಸ್.ಮಠದ, ಶ್ರೀಮತಿ ಎಸ್.ಜಿ.ಚಿಕ್ಕಮಠ, ಬಿ.ಆರ್.ಹರಿದಾಸ, ಎಫ್.ಎಸ್. ಸಿದ್ದನಗೌಡರ, ಸಂಘದ ಪ್ರದಾನ ಕಾರ್ಯದರ್ಶಿ ವಿ.ಜಿ.ಕಟದಾಳ, ಎಸ್.ಎಂ.ಮೂಡಗಲಿ, ಡಿ.ಎಸ್. ಬೊಂಗಾಳೆ, ಎಸ್.ಕೆ.ಕುಲಕರ್ಣಿ, ಎಸ್.ಎಂ.ಅಬ್ಬಾಯಿ, ಆನಂದ ನರಸಣ್ಣವರ, ಎಸ್.ವಿ.ಸಿದ್ದಮನಿ, ಎಸ್.ಬಿ.ಬೂದಯ್ಯನವರಮಠ, ಎಸ್.ಬಿ.ರೊಟ್ಟಿ. ಎ.ಎಫ್.ಪಟ್ಟಿಹಾಳ, ಎಸ್.ವಿ.ಹಿರೇಮಠ, ಕೆ.ಎಸ್. ಕುಲಕರ್ಣಿ, ಸುರೇಶ ಪಾಟೀಲ. ಮಂಜುನಾಥ ಸೊಮಣ್ಣವರ,  ಐ.ಎಂ.ಹುಣಶಿಕಟ್ಟಿ, ಜಯಶ್ರೀ ಬೂದಿಹಾಳ,  ಎಸ್.ಎಸ್. ಮಲ್ಲಾರಿ, ಚಂದ್ರು ವಣ್ಣುರ, ಐ.ಎಸ್. ಪಾಟೀಲ, ಸಿದ್ಧಲಿಂಗ ಬೋಳಶೆಟ್ಟಿ,  ಐ.ಡಿ.ಓಂಟಿ, ರಾಜು ಬೋಳಶೆಟ್ಟಿ, ಹಾಗೂ ನೂರಾರು ವಕೀಲರು, ಕಕ್ಷೀದಾರರು, ನ್ಯಾಯಾಂಗ ಸಿಬ್ಬಂದಿ ಉಪಸ್ಥಿತರಿದ್ದರು.

ಕಾನೂನು ಸೇವಾ ಸಮಿತಿ ಸಂಚಾಲಕ ಉಮೇಶ ಕಾರಜೋಳ ಲೊಕ್ ಅದಾಲತ್ ಕಾರ್ಯ ನಿರ್ವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button