Latest

ಸತ್ತವನ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್; ಸರಕಾರಿ ಜಮೀನು ಖಾಸಗಿ ವ್ಯಕ್ತಿಗೆ ಪರಭಾರೆ

ಪ್ರಗತಿವಾಹಿನಿ ಸುದ್ದಿ ಮಂಡ್ಯ: ಸತ್ತವನ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಂಡು ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೋಟ್ಯಂತರ ರೂ. ಬೆಲೆ ಬಾಳುವ ಸರಕಾರಿ ಜಮೀನನ್ನು ಕಬಳಿಕೆ ಮಾಡುವ ದೃಷ್ಟಿಯಿಂದ ಮಂಡ್ಯ ತಾಲೂಕು ಕಚೇರಿ ಅಧಿಕಾರಿಗಳು- ಸಿಬ್ಬಂದಿ ಭೂ ಕಬಳಿಕೆ ಮಾಡುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಅಕ್ರಮ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್‌. ರವೀಂದ್ರ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಪ್ರಕರಣವೇನು?:

ಮಂಡ್ಯ ಗ್ರಾಮದ ಸರ್ವೇ ನಂ.174/8ರಲ್ಲಿ 3 ಗುಂಟೆ ಜಮೀನಿದ್ದು, 1962-63ನೇ ಸಾಲಿನ ಫಸಲು ಪಹಣಿಯಂತೆ ಪಿ.ಶ್ರೀನಿವಾಸಯ್ಯ ಎಂಬುವರ ಹೆಸರಿನಲ್ಲಿದ್ದು, ಅವರ ಹೆಸರಿನಲ್ಲೇ ಸರ್ಕಾರಕ್ಕೆ ಭೂಸ್ವಾಧೀನವಾಗಿದೆ. ಅಲ್ಲದೇ, ಸರ್ವೇ ನಂ.174/3ರಲ್ಲಿ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿನಲ್ಲಿ 14 ಗುಂಟೆ ಜಮೀನಿದ್ದು, ಅದನ್ನೂ ಸರಕಾರ ಬೆಂಗಳೂರು-ಮೈಸೂರು ರಾಜ್ಯಹೆದ್ದಾರಿ, ತೋಟಗಾರಿಕೆ ಇಲಾಖೆ ಹಾಗೂ ಪ್ರವಾಸಿ ಮಂದಿರಕ್ಕೆ ಸೇರಿದ ಜಾಗವಾಗಿದೆ. ವಾಸ್ತವದಲ್ಲಿ ಸರ್ವೇ ನಂ.174ರ ಸಂಪೂರ್ಣ ಜಮೀನೆಲ್ಲವೂ ಸರಕಾರಕ್ಕೆ ಸ್ವಾಧೀನವಾಗಿದೆ. ಈ ಭೂ ಸ್ವಾಧೀನವಾಗಿರುವ 174/9ರ 3 ಗುಂಟೆ ಜಮೀನು ಪಿ.ಶ್ರೀನಿವಾಸಯ್ಯನವರ ಹೆಸರಿನಲ್ಲಿದ್ದರೂ ಕೂಡ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿಗೆ ಆರ್‌ಟಿಸಿ ತಿದ್ದಿರುವುದು ದಾಖಲೆಗಳಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಹಿಂದೆಯೇ ಮೃತಪಟ್ಟಿರುವ ಮಂಚ @ ಅಜ್ಜಹಳ್ಳಿ ಹೆಸರಿನಲ್ಲಿದ್ದ ಕಂಪ್ಯೂಟರ್‌ ಆರ್‌ಟಿಸಿಯನ್ನು ದುರ್ಬಳಕೆ ಮಾಡಿಕೊಂಡು ಸರಕಾರಿ ಜಮೀನನ್ನು ಕಬಳಿಕೆ ಮಾಡುವ ಸಲುವಾಗಿ ಮದ್ದೂರು ತಾಲೂಕು ಯಡವನಹಳ್ಳಿ ಗ್ರಾಮದ ಪಿ.ಸಿ.ಕೃಷ್ಣೇಗೌಡ ಎಂಬುವರು ಸಂಚು ರೂಪಿಸಿ ಮಂಚ ಎಂಬ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿ ಯಾವುದೋ ವ್ಯಕ್ತಿಯನ್ನು ಮಂಚ ಎಂದು ಬಿಂಬಿಸಿ 3 ಗುಂಟೆ ಜಮೀನನ್ನು 2022ರ ಫೆಬ್ರವರಿ 28 ರಂದು 23,14,276 ರು.ಗಳಿಗೆ ಕ್ರಯ ಮಾಡಿಕೊಂಡಿರುವುದಾಗಿ ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ಇನ್ನೂ ಮೂರು ದಿನ ಭಾರಿ ಮಳೆ; ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button