Kannada NewsKarnataka News

ಜನಪರ ಕಾರ್ಯಗಳನ್ನು ಗ್ರಾಮ – ಗ್ರಾಮಗಳಿಗೆ ತಲುಪಿಸಲು ಉತ್ತಮ ನಾಯಕನ ಆಯ್ಕೆ ಅಗತ್ಯ – ಶಶಿಕಲಾ ಜೊಲ್ಲೆ

ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಗ್ರಾಮ – ಗ್ರಾಮಗಳಿಗೆ ತಲುಪಿಸಲು ಉತ್ತಮ ನಾಯಕನ ಆಯ್ಕೆ ಅತ್ಯಗತ್ಯ. ಹೀಗಾಗಿ ಸದಾ ಜನರ ಹಿತಕ್ಕಾಗಿಯೇ ಶ್ರಮಿಸುವ ಅಭ್ಯರ್ಥಿಯನ್ನು ಗೆಲ್ಲಿಸಿ, ಅಭಿವೃದ್ಧಿಗೆ ಸಹಕರಿಸಿ
-ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ-  ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ  ನಿಪ್ಪಾಣಿ ಮತಕ್ಷೇತ್ರದ ಲಖನಾಪುರ ಹುನ್ನರಗಿ, ಸಿದ್ನಾಳ,ಅಕ್ಕೋಳ, ಮಮದಾಪುರ, ಗಳತಗಾ ಶಿರದವಾಡ ಗ್ರಾಮದಲ್ಲಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಸಭೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
 ಈಗಾಗಲೇ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಜನರ ಮನೆ-ಮನ ತಲುಪುತ್ತಿವೆ. ಹೀಗಾಗಿ ವಿಧಾನಪರಿಷತ್ ಚುನಾವಣೆಯಲ್ಲೂ ಜನರು ನಮಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಸರ್ವ ಕಾರ್ಯಕರ್ತರು ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಗ್ರಾಮ – ಗ್ರಾಮಗಳಿಗೆ ತಲುಪಿಸಲು ಉತ್ತಮ ನಾಯಕನ ಆಯ್ಕೆ ಅತ್ಯಗತ್ಯ. ಹೀಗಾಗಿ ಸದಾ ಜನರ ಹಿತಕ್ಕಾಗಿಯೇ ಶ್ರಮಿಸುವ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ, ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ  ಅಧ್ಯಕ್ಷರಾದ ಕಮಲ ಸುತುಳೆ, ಉಪಾಧ್ಯಕ್ಷರಾದ  ಮುನ್ಸಿಲಾಲ್ ಮುಜಾವರ, ಸದಸ್ಯರಾದ ಶ್ರೀ ಮಹಾಂತೇಶ ಪಾಟೀಲ, ವಿನೋದ ಮಗದುಮ, ಮಹಾದೇವ ಬೋತೆ, ವಿಶ್ವನಾಥ ಕಿಲ್ಲೆದಾರ,  ರಾಜೇಂದ್ರ ಕುಲಕರ್ಣಿ,  ರಾಜು ಪಾಟೀಲ, ಶ್ರೀ ಸತೀಶ ಕಿಲ್ಲೇದಾರ, ಕಲ್ಪನಾ ಪಾಟೀಲ,   ದಾದಾ ಕಿಲ್ಲೆದಾರ ಪಕ್ಷದ ಸ್ಥಳೀಯ ಮುಖಂಡರು, ಹಾಗೂ ಕಾರ್ಯಕರ್ತರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button