Film & EntertainmentKannada NewsKarnataka NewsNational

*ದರ್ಶನಗೆ ಮನೆ ಊಟ ನೀಡಲು ಅನುಮತಿ ಕೊರಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ ವಕೀಲರು*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಗೆ ಮನೆ ಊಟ, ದಿಂಬು, ಹಾಸಿಗೆ ಮತ್ತು ಪುಸ್ತಕ ನೀಡುವಂತೆ ದರ್ಶನ ಪರ ವಕೀಲರು ಹೈಕೊರ್ಟ್ ಮೆಟ್ಟಿಲೇರಿದ್ದಾರೆ.‌

ಜೈಲು ಊಟ ಸೇವಿಸಿ ದರ್ಶನ್ ತೂಕ ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ದರ್ಶನ್ ಪರ ವಕೀಲರು ಇಂದು ಹೈಕೋರ್ಟ್ ಮೊರೆ ಹೋಗಿದ್ದು ದರ್ಶನ್ ಗೆ ಮನೆ ಊಟ ದಿಂಬು ಹಾಸಿಗೆ ಮತ್ತು ಪುಸ್ತಕ ನೀಡುವಂತೆ ಮನವಿ ಸಲ್ಲಿಸಿದ್ದಾರೆ. 

ಜೈಲಿನ ಊಟ ನಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಮಾಡುತ್ತಿರುವುದರಿಂದ ಅವರಿಗೆ ವಾಂತಿ, ಭೇದಿ ಆಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಆದ್ದರಿಂದ ಮನೆಯ ಊಟ ಸೇವಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಕೂಡಲೇ ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ನ್ಯಾಯಾಲಯದಲ್ಲಿ  ದರ್ಶನ್ ಪರ ವಕೀಲರು ಮೊರೆ ಇಟ್ಟಿದ್ದಾರೆ.

Related Articles

Back to top button