ಪ್ರವಾಹಕ್ಕೆ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ಪ್ರಗತಿವಾಹಿನಿ ಸುದ್ದಿ – ಅಥಣಿ : ಮಹಾರಾಷ್ಟ್ರದಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆಯಲ್ಲಿ ಕೃಷ್ಣಾ ನದಿಗೆ 2 ಲಕ್ಷ 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ತಾಲೂಕುಗಳ ಪ್ರದೇಶಗಳಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಥಣಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಈಗಾಗಲೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ ಜಿಲ್ಲಾಡಳಿತ. ಆದರೆ ನಿನ್ನೆ ಸಂಜೆಯಿಂದ ಕೃಷ್ಣಾ ನದಿಗೆ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಬಳಿಯ ಮಾಂಗ ತೋಟದ ವಸತಿ ಪ್ರದೇಶದಲ್ಲಿ ಪ್ರವಾಹದ ನೀರು ನುಗ್ಗಿದೆ. ತನ್ನ ಗುಡಿಸಿಲನಲ್ಲಿ ಕಟ್ಟಿದ್ದ ಎಮ್ಮೆ, ಹಸು, ಮೇಕೆಗಳನ್ನು ರಕ್ಷಿಸಲು ಮಾರುತಿ ಜಾಧವ ನೀರಿನ ಸೆಳೆತವನ್ನು ಲೆಕ್ಕಿಸದೆ ರಭಸದಿಂದ ಹರಿಯುತ್ತಿದ್ದ ನೀರಿನ ಮೂಲಕ ಹೋಗಿ 4 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾನೆ.
ಕೊನೆಯದಾಗಿ ಒಂದು ಎಮ್ಮೆ ಮಾತ್ರ ಉಳಿದಿತ್ತು, ಅದನ್ನು ತರಲು ಮತ್ತೆ ಮಾರುತಿ ಜಾಧವ ಹರಿಯುವ ನೀರಿನ ಮೂಲಕ ತನ್ನ ಗುಡಿಸಲು ಕಡೆಗೆ ಹೋಗಿದ್ದಾನೆ. ಆದರೆ ಎಮ್ಮೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವಾಗ ನೀರಿನ ರಭಸಕ್ಕೆ ಮಾರುತಿ ಜಾಧವ ಕೊಚ್ಚಿಕೊಂಡು ಹೋಗಿದ್ದಾನೆ.
ಆದರೆ ಎಮ್ಮೆಯನ್ನು ಮಾತ್ರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬೆಳಗಿನ ಜಾವದ ವರೆಗೆ ಮಾರುತಿ ಜಾಧವ (54) ಕೊಚ್ಚಿಕೊಂಡು ಹೋಗಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳಿಯರು ಹುಡುಕಾಟ ನಡೆಸಿದ್ದಾರೆ, ಆದರೆ ಮಾರುತಿ ಜಾಧವ ಸಿಕ್ಕಿರಲಿಲ್ಲಾ. ಇಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ 4 ಕಿಮಿ ದೂರದಲ್ಲಿ ಮಾರುತಿ ಜಾಧವ ಮೃತದೇಹ ಪತ್ತೆಯಾಗಿದೆ.
ತಕ್ಷಣವೇ ವಿಷಯವನ್ನು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರ ಸಹಾಯದಿಂದ ಮಾರುತಿ ಜಾಧವ ಅವರ ಮೃತದೇಹವನ್ನು ಹೊರತೆಗೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ಹುಗಲಬಾಳಿ ಗ್ರಾಮ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಮಾರುತಿ ಜಾಧವ ಶವ ಸಂಸ್ಕಾರ ಮಾಡದೆ ಪಂಚಾಯತ ಮುಂದೆ ಧರಣಿ ನಡೆಸಿದರು.
2015ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಾಗ 15ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿ ಸಾವಿಗಿದಾಡಿದ್ದರು, ನೂರಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು,
ಆದರೆ ಅಂದಿನಿಂದ ಹುಲಗಬಾಳಿ ಗ್ರಾಮಕ್ಕೆ ಪುರ್ನವಸತಿ ಕಲ್ಪಿಸುವಂತೆ ಮನವಿ ಮಾಡಿದ್ದೇವು, 5 ಸ್ಥಳಗಳಲ್ಲಿ ನಮಗೆ ಪುನರ್ವಸತಿ ಕಲ್ಪಿಸುವಂತ ತಿಳಿಸಿದ್ದೇವು, ಪ್ರತಿ ಬಾರಿಯೂ ಇದೆ ರೀತಿ ಪ್ರವಾಹ ಬಂದಾಗ ನಮ್ಮ ಊರಿನ ಜನ, ಜಾನುವಾರುಗಳು ಎಷ್ಟು ಬಲಿ ಕೊಡಬೇಕು. ಮಾರುತಿ ಜಾಧವ ಅವರ ಸಾವು ಮತ್ತೆ ಇದಕ್ಕೆ ಪುಷ್ಟಿ ನೀಡಿದೆ.
ಇನ್ನು ಎಷ್ಟು ಜನರು ಬಲಿ ಪಡೆದ ಮೇಲೆ ನಮಗೆ ಪುರ್ನವಸತಿ ಕಲ್ಪಿಸುತ್ತಾರೆ ಸರಕಾರದವರು ಎಂದು ಆರೋಪಿಸಿ, ಪ್ರವಾಹದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಮಾರುತಿ ಜಾಧವ ಅವರ ಶವದ ಮರನೋತ್ತರ ಪರೀಕ್ಷೆ ನಡೆಸಲು ಬೀಡುವದಿಲ್ಲ, ಒಂದು ವಾರ ಆದರೂ ಸರಿ ನಾವು ಹುಲಗಬಾಳಿ ಗ್ರಾಮ ಪಂಚಾಯತ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸುವದಾಗಿ ಹೇಳಿದರು.
ಇಂದು ಸಿ ಎಂ ಬಿ ಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಪ್ರವಾಹ ಪಿಡಿತ ಪ್ರದೇಶಗಳಿಗೆ ಬೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಹುಲಗಬಾಳಿ ಗ್ರಾಮಕ್ಕೆ ಬಂದು ನಮ್ಮ ಗ್ರಾಮವನ್ನು ಎಂದು ಸ್ಥಳಾಂತರ ಮಾಡುತ್ತಾರೆ? ಮತ್ತು ಪುರ್ನವಸತಿ ಎಲ್ಲಿ ಕಲ್ಪಿಸಿತ್ತಾರೆ ಎಂದು ತಿಳಿಸುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲಾ ಎಂದು ನಿರ್ಧಾರ ಮಾಡಿದ್ದಾರೆ ಹುಲಗಬಾಳಿ ಗ್ರಾಮಸ್ಥರು.
ಈ ಸಮಯದಲ್ಲಿ ಅಥಣಿ ತಹಶೀಲ್ದಾರ ಎಂ ಎನ್ ಬಳಿಗಾರ, ಅಥಣಿ ಸಿಪಿಐ, ಶಂಕರಗೌಡ ಬಸಗೌಡರ, ಅಗ್ನಿಶಾಮಕ ಸಿಬ್ಬಂದಿ, ಗ್ರಾಮಸ್ಥರ ಮನವೊಲಿಸಲು ಯತ್ನಿಸದರು. ಆದರೆ ಯಾವುದೆ ಕಾರಣಕ್ಕೂ ನಾವು ಶವ ಸಂಸ್ಕಾರ ಮಾಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿನ್ನಲೆಯಲ್ಲಿ ಗ್ರಾಮದಲ್ಲಿ ಉಗ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಹೆಚ್ಚಿನ ಬೀಗಿ ಪೊಲೀಸ್ ಬಂದೋಬಸ್ತ್ ಸಹ ಒದಗಿಸಲಾಗಿದೆ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ