Kannada NewsLatestNational

70 ಸಾವಿರ ರೂ.ಗೆ ಖರೀದಿಸಿದ ಹೆಂಡತಿಯನ್ನು ಕೊಂದು ಹಾಕಿದ ದುಷ್ಕರ್ಮಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ವ್ಯಕ್ತಿಯೊಬ್ಬ 70 ಸಾವಿರ ರೂ. ಕೊಟ್ಟು ಖರೀದಿ ಮಾಡಿದ ಹೆಂಡತಿಯನ್ನು ಆಕೆಯ ವರ್ತನೆಗೆ ಬೇಸತ್ತು ಕತ್ತು ಹಿಸುಕಿ ಕೊಲೆಗೈದು ಕಾಡಿನಲ್ಲಿ ಎಸೆದಿದ್ದಾನೆ.

ನೈಋತ್ಯ ದೆಹಲಿಯ ಫತೇಪುರ್ ಬೆರಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸ್ವೀಟಿ ಎಂಬ ಮಹಿಳೆ ಕೊಲೆಯಾದವರು. ಈಕೆಯನ್ನು ಆರೋಪಿ ಧರಂವೀರ್ ಎಂಬಾತ 70 ಸಾವಿರ ರೂ.ಗೆ ಖರೀದಿ ಮಾಡಿದ್ದ. “ಸ್ವೀಟಿ ತಾವು ಎಲ್ಲಿಯವರು, ಅವರ ಮೂಲವೇನು, ಕೌಟುಂಬಿಕ ಹಿನ್ನೆಲೆ ಏನು ಎಂಬ ಬಗ್ಗೆ ಮಾಹಿತಿ ನೀಡಿರಲಿಲ್ಲ. ತಿಂಗಳುಗಟ್ಟಲೆ ಮನೆ ಬಿಟ್ಟು ಹೋಗುತ್ತಿದ್ದರು ಹೀಗಾಗಿ ಆಕೆಯನ್ನು ಕೊಲೆ ಮಾಡಿದ್ದೇನೆ” ಎಂದು ಆರೋಪಿ ಪೊಲೀಸರೆದುರು ಹೇಳಿಕೊಂಡಿದ್ದಾನೆ.

Home add -Advt

ನೈಋತ್ಯ ದೆಹಲಿಯ ಫತೇಪುರ್ ಬೆರಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಶವ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿದಾಗ ರಾತ್ರಿ 1.30ರ ಸುಮಾರಿಗೆ ಆಟೊ ರಿಕ್ಷಾವೊಂದು ಹಾದು ಹೋಗಿರುವುದು ಕಂಡುಬಂದಿದೆ. ಅದರ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಿದಾಗ ಘಟನೆ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ.

ತಾನು ಮತ್ತು ತನ್ನ ಸೋದರ ಮಾವಂದಿರಾದ ನಂಗ್ಲೋಯಿ ನಿವಾಸಿಗಳಾದ ಧರಂವೀರ್ ಮತ್ತು ಸತ್ಯವಾನ್ ಅವರು ಹರ್ಯಾಣ ಗಡಿಯಲ್ಲಿ ಸ್ವೀಟಿಯನ್ನು ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದಿರುವುದಾಗಿ ಆರೋಪಿ ಧರ್ಮವೀರ್ ಒಪ್ಪಿಕೊಂಡಿದ್ದಾನೆ. ಇವರನ್ನು ಬಂಧಿಸಲಾಗಿದ್ದು ಶವ ಸಾಗಿಸಲು ಸಹಕರಿಸಿದ ಆಟೊ ಚಾಲಕ ಅರುಣ ಎಂಬುವವನನ್ನು ಸಹ ಪೊಲೀಸರು ಬಂಧಿಸಿದ್ದಾರೆ.  

Related Articles

Back to top button