Kannada NewsLatest

ಪತ್ನಿ ಕತ್ತು ಹಿಸುಕಿ ಕೊಲೆಗೈದು ಪೊಲೀಸ್ ಠಾಣೆಗೆ ಶರಣಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ  ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಹಣಮಂತ ಸಿದ್ದಪ್ಪಾ ಹಿಡಕಲ್ ( 35) ಕೊಲೆಗೈದ ಆರೋಪಿ. ಬಸವ್ವಾ ಹಣಮಂತ ಹಿಡಕಲ್ (30) ಕೊಲೆಯಾದ ಮಹಿಳೆ.

2010ರಲ್ಲಿ ಇವರ ವಿವಾಹವಾಗಿತ್ತು. ಪತಿ ಹಣಮಂತನಿಗೆ ಯಾವುದೇ ಉದ್ಯೋಗ ಇರಲಿಲ್ಲ. ಪತ್ನಿ ಬಸವ್ವ ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ಗಂಡನಿಗೆ ಉದ್ಯೋಗ ಇಲ್ಲದೆ ಖಾಲಿ ತಿರುಗುತ್ತಿದ್ದ ಬಗ್ಗೆ ಬಸವ್ವ ಆಗಾಗಿ ಆಕ್ಷೇಪಿಸುತ್ತಿದ್ದಳು ಎನ್ನಲಾಗಿದೆ. ಇದು ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತಿತ್ತು.

ಶುಕ್ರವಾರ ರಾತ್ರಿ 10.30ರ ಸುಮಾರು ಗಂಡ- ಹೆಂಡತಿ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿದ್ದು ಪತ್ನಿ ಕೊಲೆಯಲ್ಲಿ  ಪರ್ಯವಸಾನಗೊಂಡಿದೆ.

Home add -Advt

ಹಣಮಂತ- ಬಸವ್ವ ದಂಪತಿಗೆ 10 ವರ್ಷದ  ಮಗನಿದ್ದಾನೆ. ಇದೀಗ ತಾಯಿಯನ್ನು ಕಳೆದುಕೊಂಡಿದ್ದು, ಈ ಪ್ರಕರಣದಲ್ಲಿ ತಂದೆಯೂ ಜೈಲು ಪಾಲಾಗಿರುವುದರಿಂದ ಬಾಲಕನಿಗೆ ಆಶ್ರಯ ಇಲ್ಲದಂತಾಗಿದೆ.

https://pragati.taskdun.com/betting-through-apps-arrest-of-kingpin/

https://pragati.taskdun.com/raped-blind-woman-commits-suicide-arrest-of-accused-widespread-public-outcry/

https://pragati.taskdun.com/bjp-leader-shot-dead-in-west-bengal/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button