Latest

ಪಾಪಿ ತಾಯಿ ಕೃತ್ಯ ಕೇಳಿದರೆ ನಿಂತ ನೆಲವೇ ಕುಸಿದಂತಾದೀತು

ಪಾಪಿ ತಾಯಿ ಕೃತ್ಯ ಕೇಳಿದರೆ ನಿಂತ ನೆಲವೇ ಕುಸಿದಂತಾದೀತು

ಲಂಡನ್ – 

ತಾಯಿಯೇ ದೇವರೆಂದು ನಂಬಿದವರು ನಾವು. ತಾಯಿಗೆ ಪೂಜನೀಯ ಸ್ಥಾನ ಕೊಟ್ಟಿದ್ದೇವೆ. ಮಕ್ಕಳಿಗೆ ಮೊದಲ ಗುರುವೇ ತಾಯಿ. ಆದರೆ ಇಲ್ಲೊಬ್ಬ ತಾಯಿ ನಡೆದುಕೊಂಡ ರೀತಿ, ಮಾಡಿದ ಕೃತ್ಯ ಕೇಳಿದರೆ ನಿಂತ ನೆಲವೇ ಕುಸಿದು ಹೋದ ಅನುಭವವಾಗಬಹುದು. ಆ ತಾಯಿ ಯಾರು? ಆಕೆ ಮಾಡಿದ  ಕೆಲಸ ಏನು ?

 ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ ನಿವಾಸಿ 23 ವರ್ಷದ ಮಾಡೆಲ್ ಲೂಯಿಸ್ ಪೋರ್ಟನ್ ಮಾಡಿರುವ ಘನಘೋರ ಕೃತ್ಯ ಇದು.
ಪರ ಪುರುಷರೊಂದಿಗಿನ ಅಕ್ರಮ ಸಂಬಂಧ ತಿಳಿದ ಈಕೆಯ ಪತಿ ಇವಳನ್ನು ಬಿಟ್ಟು ಹೋಗುತ್ತಾನೆ, ಹೋಗುವ ಮೊದಲು ಮಕ್ಕಳನ್ನೂ ಸಹ ಜೊತೆಯಲ್ಲಿ ಕರೆದೊಯ್ದಿದ್ದರೆ ಇಂದು ಆ ಮಕ್ಕಳು ಜೀವಂತ ಇರುತ್ತಿದ್ದವೇನೋ….
ತನ್ನ ಗಂಡ ತನ್ನನ್ನು ಬಿಟ್ಟು ಹೋದ ಚಿಂತೆಯಿಲ್ಲದೆ, ಇದೆ ಸ್ವಾತಂತ್ರ್ಯವನ್ನು ಆಕೆ ದುರುಪಯೋಗಪಡಿಸಿಕೊಂಡಳು. ಮೊದಲೆಲ್ಲಾ ಕದ್ದು ಮುಚ್ಚಿ ಮಾಡುತ್ತಿದ್ದ ಶೃಂಗಾರ ಆಟಗಳನ್ನು ಮನೆಯಲ್ಲಿಯೇ ಮಾಡಲು ಮುಂದುವರೆಸಿದಳು. ಇತರ ಪುರುಷರನ್ನು ಮನೆಗೆ ಕರೆತಂದಾಗ ಮಕ್ಕಳಿಂದ ಅಡ್ಡಿ ಎಂದು ಯಾವಾಗಲೂ ಕೋಪಗೊಳ್ಳುತ್ತಿದ್ದಳು. ಇದೇ ಕೋಪದಲ್ಲಿ ತನ್ನ ಮೂರು ವರ್ಷದ ಮೊದಲ ಮಗಳಿಗೆ ಬಾರಿ ಕಿರುಕುಳ ನೀಡಲಾರಂಭಿಸಿದಳು, ಒಮ್ಮೆ ಅಮ್ಮನ ಅತಿಯಾದ ಹಿಂಸೆಯಿಂದ ಆ ಪುಟ್ಟ ಕಂದಮ್ಮ ಪ್ರಜ್ಞಾಹೀನವಾಗಿ ಬಿದ್ದಳು, ಆಕೆಯನ್ನು ಕುದ್ದು ಹಿಂಸೆ ನೀಡಿದ ತಾಯಿಯೇ ಆಸ್ಪತ್ರೆಗೆ ಸೇರಿಸಿದಳು.
ಆಕೆಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಹೇಳಿದ ಆಕೆ, ಮತ್ತೆ ಯುವಕನೋರ್ವನಿಗೆ ಕರೆ ಮಾಡಿ  ತಿಳಿಸಿ, ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಾಳೆ, ನಗ್ನ ಫೋಟೋ ಶೂಟ್ ನಡೆಸಿ ಆ ಯುವಕನಿಗೆ ಆ ಫೋಟೋಗಳನ್ನು ನೀಡಿ ದುಡ್ಡು ಪಡೆದಿದ್ದಾಳೆ.
ಮಗಳು ಆರೋಗ್ಯವಾಗಿದ್ದಾಳೆ ಎಂದು ಆಸ್ಪತ್ರೆಯಿಂದ ಮಾಹಿತಿ ಪಡೆದ ನಂತರ ಅಲ್ಲಿಗೆ ಹೋಗಿ ಮಗಳನ್ನು ಮನೆಗೆ ಕರೆತಂಡಿದ್ದಾಳೆ. ಕೆಲವು ದಿನಗಳ ನಂತರ, ಮತ್ತೆ ಹಿಂಸೆ ನೀಡಲು ಪ್ರಾರಂಭಿಸಿದ ಆಕೆ, ಈ ಬಾರಿ ಮೊದಲ ಮಗಳು ಲೆಕ್ಸಿಯನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ಈ ಘಟನೆ ನಡೆದ ಸ್ವಲ್ಪ ದಿನದಲ್ಲಿಯೇ 18 ತಿಂಗಳ ತನ್ನ ಎರಡನೇ ಮಗಳನ್ನು ಸಹ ಕೊಂದಿದ್ದಾಳೆ.
ಕೆಲವು ಸ್ಥಳೀಯರು ಈ ಹತ್ಯೆಗಳ ಬಗ್ಗೆ ದೂರು ನೀಡಿದ ನಂತರ ಪೊಲೀಸರು ಲೂಯಿಸಿಯನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದು ಬಂದಿದೆ, ಅಷ್ಟೇ ಅಲ್ಲದೆ ಮಗಳನ್ನು ಚಿಕಿತ್ಸೆಗೆ ಕರೆದೊಯ್ದ ಆಕೆ ಆಸ್ಪತ್ರೆಯ ಟಾಯ್ಲೆಟ್ ನಲ್ಲಿಯೂ ಸಹ ಶೃಂಗಾರ ಕೆಲಸಗಳನ್ನು ಮಾಡಿದ್ದಳು ಎಂದು ತಿಳಿದು ಬಂದಿದೆ, ಅಲ್ಲದೆ ಅಪರಿಚಿತರಿಗೆ ಕರೆಮಾಡಿ, ತನ್ನ ನಗ್ನ ಚಿತ್ರಗಳನ್ನು ಕಳುಹಿಸಿ, ದುಡ್ಡು ಪಡೆಯುತ್ತಿದ್ದಳು ಎನ್ನಲಾಗಿದೆ.
ಏನೂ ಅರಿಯದ ಮುದ್ದು ಕಂದಮ್ಮಗಳು , ನಮ್ಮ ತಾಯಿಯೇ ನಮ್ಮನ್ನು ಕೊಲ್ಲುತ್ತಾಳೆ ಎಂದು ಹೇಗೆ ತಾನೆ ತಿಳಿಯಲು ಸಾಧ್ಯ? ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button