Latest

ಮಗನನ್ನು ಕೊಂದು ಮಾಂಸ ಭಕ್ಷಿಸಿದ ತಾಯಿ

ಪ್ರಗತಿವಾಹಿನಿ ಸುದ್ದಿ, ಕೈರೊ: ತಾಯಿ ಎಂದರೆ ಮಮತೆಯ ಸೆಲೆ ಎಂದೇ ಪರಿಗಣಿಸಲಾಗುತ್ತದೆ. ಎಂಥ ಸಂದರ್ಭದಲ್ಲೂ ಎಲ್ಲ ಜೀವಿಗಳಲ್ಲೂ ತಾಯಿಯಾದವಳು ತನ್ನ ಮಗುವಿನ ರಕ್ಷಣೆ ಮಾಡಿಕೊಳ್ಳುವುದು ಸಾಮಾನ್ಯ. ಇದರೆ ಇಲ್ಲೊಬ್ಬ ತಾಯಿ ಹೆತ್ತ ಮಗನನ್ನೇ ಕೊಂದು ಆತನ ಮಾಂಸ ಭಕ್ಷಿಸಿ ವಿಕೃತಿ ಮೆರೆದು ವಿಶ್ವಾದ್ಯಂತ ಸುದ್ದಿಯಾಗಿದ್ದಾಳೆ.

ಈಜಿಪ್ಟ್ ದೇಶದಲ್ಲಿ ನಡೆದ ಈ ಘಟನೆ ಇಡೀ ಜಗತ್ತಿನ ಮನ ಕಲುಕಿದೆ. ಹನಾ ಮೊಹಮ್ಮದ್ ಹಸನ್ ಎಂಬ 29 ವರ್ಷದ ಮಹಿಳೆ ತನ್ನ ಐದು ವರ್ಷದ ಮಗ ಯೂಸೆಫ್‌ನನ್ನು ಕೊಂದು ಆತನ ದೇಹದ ಭಾಗಗಳನ್ನು ಬೇಯಿಸಿ ತಿಂದಿದ್ದಾಳೆ.

ಹಸನ್ ಎಂಬಾತನೊಂದಿಗೆ ಮದುವೆಯಾಗಿ ಮಗನನ್ನು ಪಡೆದಿದ್ದ ಈಕೆ ನಾಲ್ಕು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದಳು. ಮಾಜಿ ಪತಿಯ ಯಾವ ಕುರುಹುಗಳೂ ಇರಕೂಡದೆಂಬ ಕಾರಣಕ್ಕೆ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾಳೆ. ನಂತರದಲ್ಲಿ ಆತನ ತಲೆ ಹಾಗೂ ದೇಹದ ಮಾಂಸಗಳನ್ನು ನೀರಿನಲ್ಲಿ ಬೇಯಿಸಿ ಭಕ್ಷಿಸಿದ್ದಾಳೆ.

ತನ್ನ ಮಗ ಸದಾ ತನ್ನೊಂದಿಗಿರಬೇಕೆಂಬ ಕಾರಣಕ್ಕೆ ಮಾಂಸ ಭಕ್ಷಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಈಕೆಯ ಕೃತ್ಯಕ್ಕೆ ಸ್ವತಃ ಅಲ್ಲಿನ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

Home add -Advt

ಈಕೆ ಮಾನಸಿಕವಾಗಿ ಸದೃಢವಾಗಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದ್ದು ದುರುದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾಳೆಂದು ಹೇಳಲಾಗಿದೆ.

ಮಗುವಿನ ಮೃತದೇಹ ಹೃದಯವಿದ್ರಾವಕವಾಗಿರುವುದನ್ನು ಕಂಡು ತಂದೆ ಹಸನ್ ಅವರಿಗೆ ಮಗನ ದೇಹ ನೋಡಲಿಕ್ಕೂ ಅವಕಾಶ ನೀಡಲಾಗಿಲ್ಲ. ಸದ್ಯ ಮಹಿಳೆಯನ್ನು ಬಂಧಿಸಿದ್ದು ಜಗತ್ತಿನ ನಾನಾ ಭಾಗಗಳಲ್ಲಿ ಈ ಬಗ್ಗೆ ವ್ಯಾಪಕ ವ್ಯಥೆ, ಆಕ್ರೋಶದ ಭಾವನೆಗಳು ವ್ಯಕ್ತವಾಗಿವೆ.

https://pragati.taskdun.com/a-man-who-strangled-his-wife-and-surrendered-to-the-police-station/

https://pragati.taskdun.com/raped-blind-woman-commits-suicide-arrest-of-accused-widespread-public-outcry/

https://pragati.taskdun.com/bjp-leader-shot-dead-in-west-bengal/

Related Articles

Back to top button