Latest

ಶಿರಸಿಯಲ್ಲಿ ಪೇಟೆ ತಿರುಗುವ ಪುಂಡರಿಗೆ ಹೊಸ ರೀತಿಯ ಪಾಠ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗ್ರತಿ ಮುಡಿಲಸಲು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಘರ ವಾಪಸಿ ಎಂಬ ವಿನೂತನ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
 ಶಿರಸಿ ನಗರದಲ್ಲಿ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರುತ್ತಿರುವ ಸಾರ್ವಜನಿಕರ ಕೈಯಲ್ಲಿ ಮೇರಿ ಸುರಕ್ಷಾ ಮೇರಿ ಜಿಮ್ಮೆದಾರಿ ಹೈ, ಮೈ ಘರ ವಾಪಸ್ ಜಾವೊಂಗಾ ಘೋಷ ವಾಕ್ಯವುಳ್ಳ ಘರ ವಾಪಸಿ ಭಿತ್ತಿಫಲಕವನ್ನು ಕೊಟ್ಟು ಅವರಿಂದ ನನ್ನ ಸುರಕ್ಷತೆ ನನ್ನ ಜವಾಬ್ದಾರಿಯಾಗಿದೆ. ನಾನು ಮರಳಿ ಮನೆಗೆ ಹೋಗುತ್ತೇನೆ. ಮತ್ತೆ ಮನೆಯಿಂದ ಹೊರಗೆ ಬರುವುದಿಲ್ಲ. ಒಂದು ವೇಳೆ ಹೊರಗೆ ಬಂದಲ್ಲಿ ನನ್ನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಅಂತಾ ಸ್ವ ಇಚ್ಛೆಯಿಂದ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡು ತಿಳುವಳಿಕೆ ನೀಡಿ ಕಳುಹಿಸಿ ಕೊಡುತ್ತಿದ್ದಾರೆ.
ಶಿರಸಿ ಪೊಲೀಸರು ಸಾರ್ವಜನಿಕರಿಗೆ ಪ್ರತಿ ನಿತ್ಯ ಒಂದಿಲ್ಲ ಒಂದು ವಿನೂತನ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ  ಅನವಶ್ಯಕವಾಗಿ ರಸ್ತೆಗೆ ಬರುವ ಜನರ  ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಎರಡು ದಿನಗಳ  ಹಿಂದೆ, ನನ್ನನ್ನು ಕ್ಷಮಿಸಿ ಎನ್ನುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಘರ ವಾಪಸಿ ಕೊರೊನಾ ಜಾಗೃತಿ ಅಭಿಯಾನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಸಿಪಿಐ ಪ್ರದೀಪ್ ಬಿ ಯು ಹಾಗೂ ಪಿಎಸ್ಐ ನಾಗಪ್ಪ ಸೇರಿದಂತೆ ಸಿಬ್ಬಂದಿ  ಪಾಲ್ಗೊಂಡಿದ್ದರು.

Related Articles

Back to top button