ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(IRCTC) ದೇಖೋ ಅಪ್ನಾ ದೇಶ್ ಉಪಕ್ರಮದಡಿ ಮಾ.31ರಿಂದ ಭಾರತ- ನೇಪಾಳ ಆಸ್ಥಾ ಯಾತ್ರೆಯನ್ನು ಆಯೋಜಿಸಿದೆ.
ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ನಡೆಯುವ ಯಾತ್ರೆಯಲ್ಲಿ ಕೇವಲ 30 ಸಾವಿರ ರೂ. ವೆಚ್ಚದಲ್ಲಿ ನೇಪಾಳ, ಅಯೋಧ್ಯೆ, ಪ್ರಯಾಗರಾಜ್ ಮತ್ತು ವಾರಾಣಸಿಗೆ ದೊಡ್ಡ ದೇಗುಲಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 9 ರಾತ್ರಿಗಳು ಸೇರಿದಂತೆ 10 ದಿನಗಳ ಈ ಟೂರ್ ಪ್ಯಾಕೇಜ್ ರೈಲು, ಬಸ್, ವಸತಿ, ಊಟೋಪಾಹಾರ ಒಳಗೊಂಡಿರುತ್ತದೆ.
ಜಲಂಧರ್ ನಗರದಿಂದ ಪ್ರವಾಸ ಆರಂಭವಾಗಲಿದ್ದು ಲೂಧಿಯಾನ, ಚಂಡೀಗಢ, ಅಂಬಾಲಾ, ಕುರುಕ್ಷೇತ್ರ, ಪಾಣಿಪತ್, ದೆಹಲಿ ಸಫ್ದರ್ಜಂಗ್, ಗಾಜಿಯಾಬಾದ್, ಅಲಿಗಢ, ತುಂಡಿಯಾ, ಕಾನ್ಪುರ ನಿಲ್ದಾಣಗಳ ಮೂಲಕ ಹಾದುಹೋಗುವ ರೈಲನ್ನು ಈ ಮಾರ್ಗದ ಅನ್ಯ ನಿಲ್ದಾಣಗಳಲ್ಲೂ ಹಿಡಿಯಬಹುದು. ರೈಲಿನ 3AC ಕೋಚ್ನಲ್ಲಿ ಪ್ರಯಾಣಿಕರನ್ನು ಕಾಯ್ದಿರಿಸಲಾಗುತ್ತದೆ.
ಸುಪೀರಿಯರ್ ಟೂರ್ ಪ್ಯಾಕೇಜ್ ನಲ್ಲಿ ಇಎಸಿ ಕೊಠಡಿಗಳು ಮತ್ತು ಸಾಮಾನ್ಯ ಕೊಠಡಿಗಳೂ ಲಭ್ಯ ಇವೆ. ಪ್ಯಾಕೇಜ್ನ ಬೆಲೆ 41,090 ರೂ. ಆದರೆ, ಇಬ್ಬರು ಅಥವಾ ಮೂವರಿದ್ದರೆ ಪ್ರತಿ ವ್ಯಕ್ತಿಗೆ 31,610 ರೂ.ನಿಗದಿಪಡಿಸಿದೆ. 5 ರಿಂದ 11 ವರ್ಷದ ಮಕ್ಕಳು ಇದ್ದರೆ, ಪ್ಯಾಕೇಜ್ನ ಬೆಲೆ 28,450 ರೂ. ಆಗಲಿದೆ.
ಸ್ಟ್ಯಾಂಡರ್ಡ್ ಪ್ಯಾಕೇಜ್ನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ 36,160 ರೂ., ಇಬ್ಬರು ಅಥವಾ ಮೂವರು ಪ್ರಯಾಣಿಸುತ್ತಿದ್ದರೆ ಒಬ್ಬರಿಗೆ 27,815 ರೂ. ನಿಮ್ಮೊಂದಿಗೆ 5ರಿಂದ 11 ವರ್ಷದೊಳಗಿನ ಮಕ್ಕಳಿದ್ದರೆ, 25,035 ರೂ. ನೀಡಬೇಕಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ