Latest

ಮುಂದಿನ ಐದು ದಿನಗಳಲ್ಲಿ ಐದು ರಾಜ್ಯಗಳಲ್ಲಿ ಮಳೆ ಸಂಭವ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ನಾನಾ ಕಡೆ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು ಮುಂಬರುವ ಐದು ದಿನಗಳ ಅವಧಿಯಲ್ಲಿ ಐದು ರಾಜ್ಯಗಳಲ್ಲಿ ತೀವ್ರ ಗಾಳಿಯೊಂದಿಗೆ ಮಳೆಯಾಗುವ ಸಂಭವದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಪಶ್ಚಿಮ ಹಿಮಾಲಯದ ಪ್ರದೇಶಗಳಲ್ಲಿ ಮಾ.14 ರವರೆಗೆ ಮಳೆಯೊಂದಿಗೆ ಬಲವಾದ ಗಾಳಿ ಬೀಸಲಿದ್ದು, ಮಾ. 15 ರಿಂದ 17 ರವರೆಗೆ ದಕ್ಷಿಣ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಇಂದು ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆಯೊಂದಿಗೆ ಮಳೆಯಾಲಿದೆ. ಗುಜರಾತ್‌ನಲ್ಲಿ ಮಾ. 14 ರವರೆಗೆ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಹಾಗೂ ಮಾ.16ರವರೆಗೆ ಭಾಗಶಃ ಛತ್ತೀಸ್‌ಗಢದಲ್ಲಿ ಮಳೆಯಾಗಬಹುದು. ಮಾರ್ಚ್ 17 ರವರೆಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪೂರ್ವ ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

https://pragati.taskdun.com/international-womens-day-hindalco-sabha-bhavancrime-division-deputy-commissioner-sneha-p-v/
https://pragati.taskdun.com/suicide-of-a-young-woman-from-athani-investigation-continues/
https://pragati.taskdun.com/savadis-defensive-game-sons-offensive-game/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button