Kannada NewsKarnataka News
ಚಿಕ್ಕಪ್ಪನ ಟ್ರ್ಯಾಕ್ಟರ್ ಗೆ ಸಿಲುಕಿ ಒಂದು ವರ್ಷದ ಮಗು ಧಾರುಣ ಸಾವು

ಪ್ರಗತಿವಾಹಿನಿ ಸುದ್ದಿ, ಮುರಗೋಡ: ಚಿಕ್ಕಪ್ಪನ ಟ್ರ್ಯಾಕ್ಟರ್ ಗೆ ಸಿಲುಕಿ ಒಂದು ವರ್ಷದ ಮಗು ಧಾರುಣವಾಗಿ ಸಾವಿಗೀಡಾಗಿದೆ.
ಮುರಗೋಡ ಠಾಣೆ ವ್ಯಾಪ್ತಿಯ ಮುಗಳಿಹಾಳ ಗ್ರಾಮದ ತೋಟದ ಮನೆಯಲ್ಲಿ ಘಟನೆ ನಡೆದಿದೆ.
ಒಂದು ವರ್ಷದ ಗಂಡು ಮಗು ಚಂದನ್ ಪುಂಜಿ ಟ್ರಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದು, ಮಗುವಿನ ಚಿಕ್ಕಪ್ಪ ಪ್ರಕಾಶ್ ಬಸಪ್ಪ ಪುಂಜಿ ತನ್ನ ಟ್ರಾಕ್ಟರ್ ಅನ್ನು ರಿವರ್ಸ್ ತೆಗೆದುಕೊಳ್ಳುವಾಗ ಮಗು ಸಿಲುಕಿದೆ.
ಸೋಮವಾರ ಸಂಜೆ 6 ಗಂಟೆ ವೇಳೆ ಘಟನೆ ನಡೆದಿದೆ.




