Kannada NewsKarnataka NewsLatest

​ಅಭಿವೃದ್ಧಿ ಸಹಿಸದವರ ಕುಚೋದ್ಯ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ದೂರು

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಕಿಡಿಗೇಡಿಗಳು ​ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅವಮಾನ ಮಾಡುವ ರಾಜಕೀಯ ದುರುದ್ದೇಶದಿಂದ  ಹಳ್ಳಿಗಳಲ್ಲಿ ಬ್ಯಾನರ್ ಗಳನ್ನು ಹಾಕುತ್ತಿದ್ದು, ಅಂತವರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಲಗಾ, ಬಾಗೇವಾಡಿ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 
ಹಲಗಾ ಜಿಲ್ಲಾಪಂಚಾಯಿತಿ ಹಾಗೂ ಹಿರೇಬಾಗೇವಾಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮದ ಜನರು ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದರು. ಕೂಡಲೇ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಂತವರಿಂದಾಗಿ ಗ್ರಾಮಗಳಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗುವದಲ್ಲದೆ, ಅಹಿತಕರ ಘಟನೆಗಳಿಗೆ ಕಾರಣವಾಗಬಹುದು. ಹಾಗಾಗಿ ಕೂಡಲೇ ಅಂತವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಬೆಳಗಾವಿ ನಗರಾಭಿವದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತ ಮಾರಿಹಾಳಕರ್, ಪ್ರಮುಖರಾದ ನಾಮದೇವ ಜೋಗಣ್ಣವರ್,  ರಾಮಾ ಕಾಕತ್ಕರ್, ಪ್ರಮೋದ ಜಾಧವ, ಲಕ್ಷ್ಮಣ ಮುಚ್ಚಂಡಿ, ಈರಪ್ಪ ಭೊಮ್ಮನ್ನವರ್, ನಾಗಪ್ಪ ತಳವಾರ, ನಾಗಯ್ಯಪೂಜಾರಿ, ಮಹಾವೀರ ಪಾಟೀಲ, ಮನೋಹರ ಬಾಂಡಗೆ, ಅರ್ಜುನಗೌಡ ಪಾಟೀಲ, ಬಾಳು ಪಾಟೀಲ, ದಿಲೀಪ ಕೊಂಡುಸ್ಕೊಪ್ಪ, ರಾಜು ಜಾಧವ, ಬಸವರಾ ತಳವಾರ, ಬಸವರಾಜ ವಾಣಿ, ಸುಕುಮಾರ ಹುಡೇದ, ಶಾಂತು ಬೆಲ್ಲದ, ವಿಶ್ವನಾಥ ಕಿಳ್ಳಿಕೇತರ್, ಮನೋಹರ ಮುಚ್ಚಂಡಿ ಸೇರಿದಂತೆ ನೂರಾರು ಜನರು ಪೊಲೀಸ್ ಠಾಣೆಗೆ ಆಗಮಿಸಿದ್ದರು.
​ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದು, ಶೀಘ್ರ ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button