
ಪ್ರಗತಿವಾಹಿನಿ ಸುದ್ದಿ: ವಿಚಾರಣಾಧೀನ ಖೈದಿ ಜೈಲಿನಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ಹಾವೇರಿಯ ಕೆರೆಮತ್ತಿಹಳ್ಳಿ ಬಳಿ ಇರುವ ಜಿಲ್ಲಾಕಾರಾ ಗೃಹದಲ್ಲಿ ನಡೆದಿದೆ.
ಕೋಟೆಪ್ಪ ಅಂಬಿಗೇರ್ (42) ನೇಣಿಗೆ ಶರಣಾದ ಖೈದಿ. ಮೃತ ಕೋಟೆಪ್ಪ ಅಂಬಿಗೇರ್ ಸುಮಾರು ಆರುವರೆ ವರ್ಷಗಳ ಹಿಂದೆ ಡಬ್ಬಲ್ ಮರ್ಡರ್ ಮಾಡಿ ಜೈಲು ಪಾಲಾಗಿದ್ದ. ಹೃದಯ ಸಂಬಂಧಿ ಕಾಯಿಲೆ ಇತ್ತು. ನ್ಯಾಯಾಲಯದಿಂದ ಬೆಲ್ ಸಿಕ್ಕಿರಲಿಲ್ಲ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ