ಪ್ರತ್ಯೇಕ ಪ್ರಕರಣ: ನವಜಾತ ಗಂಡು ಶಿಶುಗಳನ್ನು ಬಿಟ್ಟು ಹೋದ ತಾಯಂದಿರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: : ಗೋಕಾಕ ಆಸ್ಪತ್ರೆಯಿಂದ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಆ.೨೨, ೨೦೨೩ ರಂದು ಮಧ್ಯಾಹ್ನ ೩.೧೫ ಗಂಟೆಗೆ ಅಪರಿಚಿತ ಮಹಿಳೆಯು ೨೨ ದಿನದ ಗಂಡು ಮಗುವನ್ನು NICU ವಿಭಾಗಕ್ಕೆ ಮಗುವಿಗೆ ಉಸಿರಾಟದ ಸಮಸ್ಯೆ ಇರುವುದರಿಂದ ((Ventilator & Tube)) ನಂತರ NICU ಸಿಬ್ಬಂದಿಗಳು ಮಗುವಿನ ದಾಖಲು ಪತ್ರ (ಓಪಿಡಿ) ಮಾಡಿಕೊಂಡು ಬರಲು ತಾಯಿಗೆ ಹೇಳಿರುತ್ತಾರೆ.
ಮಗುವಿನ ತಾಯಿಯು ಅದೆ ದಿನ ಸಂಜೆ ೩.೪೦ ಗಂಟೆಗೆ ಓಪಿಡಿ ಚೀಟಿಯನ್ನು ಮಾಡಲೆಂದು ಹೊದವರು ಮರಳಿ ಎನ್.ಆಯ್.ಸಿ.ಯು. ವಿಭಾಗಕ್ಕೆ ಬಂದಿರುವುದಿಲ್ಲ ಎಂದು ನಂತರ ಆಸ್ಪತ್ರೆಯ ಸಿಬ್ಬಂದಿಗಳು ತಾಯಿಯನ್ನು ಎಲ್ಲ ಕಡೆಗೆ ಹುಡುಕಿದರು ಸಹ ಪತ್ತೆಯಾಗದೆಯಿರುವುದರಿಂದ ಈ ವಿಷಯವನ್ನು ಸ್ಥಳೀಯ ಎ.ಪಿ.ಎಮ್.ಸಿ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಿರುತ್ತಾರೆ.
ಸದರಿ ಮಗು ಸುಮಾರು ಎರಡು ತಿಂಗಳಿನಿಂದ ಬಿಮ್ಸ್ ಆಸ್ಪತ್ರೆಯ NICU ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆದು ಸದ್ಯ ಮಗುವಿನ ಆರೋಗ್ಯ ಸುಧಾರಣೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿ ಸದರಿ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರ ರಾಮತಿರ್ಥನಗರ ಬೆಳಗಾವಿಯಲ್ಲಿ ಅಭೀರಕ್ಷಣೆಗಾಗಿ ಇಡಲಾಗಿದೆ. ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸುವರ್ಣ ವಿಧಾನಸೌಧ ಬೆಳಗಾವಿ ದೂ: ೦೮೩೧-೨೪೭೪೧೧೧/೮೦೭೩೯೭೨೯೨೯ ಕ್ಕೆ ಸಂಪರ್ಕಿಸಬೇಕು ಎಂದು ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೈವಿಕ ಪಾಲಕರು ಸಂಪರ್ಕಿಸಲು ಕೋರಿಕೆ
ಅಪರಿಚಿತ ಮಹಿಳೆಯು ಆಶ್ರಯ ಸ್ವಾಧಾರ ಗೃಹ ಹಿಡಕಲ್ ಡ್ಯಾಮದಿಂದ ಜೂನ್.೨೨ ೨೦೨೩ ರಂದು ಜಿಲ್ಲಾ ಆಸ್ಪತ್ರೆಯ ಹೆರಿಗೆ ಪ್ರಸುತಿ ವಿಭಾಗದಲ್ಲಿ ದಾಖಲಾಗಿ ಜು.೫, ೨೦೨೩ ರಂದು ಬೆಳಿಗ್ಗೆ ೧೧.೫೧ ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿ, ಮಗುವಿಗೆ ಉಸಿರಾಟ ತೊಂದರೆ ಹಾಗೂ ಕಡಿಮೆ ತೂಕವಿರುವುದರಿಂದ ಆಸ್ಪತ್ರೆ ಸಿಬ್ಬಂದಿಯವರು ಮಗುವನ್ನು ಎನ್.ಆಯ.ಸಿ.ಯು. ವಿಭಾಗಕ್ಕೆ ದಾಖಲು ಮಾಡಿರುತ್ತಾರೆ.
ತಾಯಿಯು ಸೆ. ೦೪ ೨೦೨೩ ರಂದು ಬೆಳಿಗ್ಗೆ ೬ ಗಂಟೆಗೆ ಪ್ರಸೂತಿ ವಿಭಾಗದಿಂದ ಮಗುವಿನ ಕಡೆ (ಎನ್.ಆಯ.ಸಿ.) ವಿಭಾಗಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೊದವರು ಮರಳಿ ವಾರ್ಡಿಗೆ ಬಂದಿರುವುದಿಲ್ಲ ಎಂದು ಸ್ಥಳೀಯ ವೈದ್ಯಾಧಿಕಾರಿಗಳ ಮೂಲಕ ಎ.ಪಿ.ಎಮ್.ಸಿ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಿರುತ್ತಾರೆ.
ಸದರಿ ಮಗು ಸುಮಾರು ನಾಲ್ಕು ತಿಂಗಳಿನಿಂದ ಬಿಮ್ಸ್ ಆಸ್ಪತ್ರೆಯ NICU ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆದು ಸದ್ಯ ಮಗುವಿನ ಆರೋಗ್ಯ ಸುಧಾರಣೆಯಾಗಿರುತ್ತದೆ. ಹಾಗೂ ಮಗುವನ್ನು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರ ರಾಮತಿರ್ಥನಗರ ಬೆಳಗಾವಿಯಲ್ಲಿ ಅಭೀರಕ್ಷಣೆಗಾಗಿ ಇರಿಸಲಾಗಿದೆ.
ಸದರಿ ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸುವರ್ಣ ವಿಧಾನಸೌಧ ಬೆಳಗಾವಿ ದೂ: ೦೮೩೧-೨೪೭೪೧೧೧/೮೦೭೩೯೭೨೯೨೯ ಗೆ ಸಂಪರ್ಕಿಸಬೇಕು ಎಂದು ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ