ಪ್ರಗತಿವಾಹಿನಿ ಸುದ್ದಿ: ತಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ತನಗೆ ಸಾಲ ಬೇಕು ಎಂದು ಬ್ಯಾಂಕ್ ಗೆ ಸಾಲ ಕೇಳಲು ಹೋದ ಮಹಿಳೆ ಹನಿ ಟ್ರ್ಯಾಪ್ ಮಾಡುವ ಮೂಲಕ ಬ್ಯಾಂಕ್ ಸಿಇಒನನ್ನೇ ದಿವಾಳಿಯಾಗುವಂತೆ ಮಾಡಿರುವ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಮಹಿಳೆ ಬ್ಯಾಂಕ್ ನಲ್ಲಿ ಸಾಲ ಕೇಳಲು ಹೋಗಿದ್ದಾಳೆ. ಮಹಿಳೆಯ ಮನೆ ದಾಖಲೆಗಳು ಸರಿ ಇಲ್ಲ ಎಂಬುವುದು ಬ್ಯಾಂಕ್ ಸಿಬ್ಬಂದಿಗೆ ತಿಳಿದಿದೆ. ಆಗ ಬ್ಯಾಂಕ್ ನವರು ಆಕೆಯ ಮನೆಯ ಸರ್ವೇ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬ್ಯಾಂಕ್ ಸಿಇಒ ಒಬ್ಬರೆ ಆಕೆಯ ಮನೆಗೆ ಸರ್ವೇ ಮಾಡಲು ತೆರಳಿದಾಗ ಟ್ರ್ಯಾಪ್ ಮಾಡಿದ್ದಾಳೆ.
ಬ್ಯಾಂಕ್‌ನ ನಿವೃತ್ತ ಸಿಇಒ ಹೇಳುವ ಪ್ರಕಾರ, ಪ್ರಾರಂಭದಲ್ಲಿ ಮಹಿಳೆ ತಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ತನಗೆ ಲೋನ್ ಬೇಕು ಎಂದು ಮನವಿ ಮಾಡಿದ್ದಾಳೆ. ಆದರೆ ಲೋನ್ ಪ್ರಕ್ರಿಯೆಯ ವೇಳೆ ಆಕೆ ನೀಡಿದ ಡಾಕ್ಯುಮೆಂಟ್ಸ್ ಸರಿ ಇಲ್ಲ ಎಂಬುದು ಬ್ಯಾಂಕ್ ಸಿಬ್ಬಂದಿ ಅರಿವಿಗೆ ಬಂದಿದ್ದು, ಅವರು ಆಕೆಯ ಮನೆಯನ್ನು ಸರ್ವೇ ಮಾಡಲು ಮುಂದಾಗಿದ್ದಾರೆ. ಅದರಂತೆ ಥಾಣೆಯ ಕೊಪ್ರಿ ಬಳಿ ಇರುವ ಆನಂದ್ ನಗರ ಪ್ರದೇಶದಲ್ಲಿರುವ ಮನೆಗೆ ಮನೆ ಸಮೀಕ್ಷೆಗಾಗಿ ಸಿಇಒ ಒಬ್ಬರೇ ಬಂದಿದ್ದಾರೆ.
ಈ ವೇಳೆ ಮಹಿಳೆ ಬ್ಯಾಂಕ್ ಸಿಇಒಗೆ ತನ್ನ ಮೈಮಾಟ ತೋರಿಸಿ ಬಲೆಗೆ ಬೀಳುವಂತೆ ಮಾಡಿ ಮಂಚಕ್ಕೆ ಕರೆದಿದ್ದಾಳೆ. ಇದಾದ ನಂತರ ಆಕೆಗೆ ಪ್ರತಿ ತಿಂಗಳು 7,300 ರೂ ಇಎಂಐ ಕಟ್ಟುವಂತೆ 3 ಲಕ್ಷ ರೂಪಾಯಿ ಸಾಲ ನೀಡಲಾಗಿದೆ.
ಒಂದು ತಿಂಗಳ ನಂತರ ಮಹಿಳೆ ಬ್ಯಾಂಕ್ ಸಿಇಒನನ್ನು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾಳೆ. ಬ್ಯಾಂಕ್ ಸಿಇಒ ಆಕೆಯ ಮೊಬೈಲ್ ಫೋನ್‌ಗೆ ಕಳುಹಿಸಿದ ಬೆತ್ತಲೆ ಫೋಟೋಗಳನ್ನು ಆತನ ಕುಟುಂಬ ಹಾಗೂ ಸಹೋದ್ಯೋಗಿಗಳಿಗೆ ಕಳುಹಿಸುವುದಾಗಿ ಬೆದರಿಸಿ, ತನಗೆ 8 ಕೋಟಿ ಹಣ ಪಾವತಿ ಮಾಡುವಂತೆ ಹೇಳಿದ್ದಾಳೆ.
ಇತ್ತ ಮರ್ಯಾದೆಗೆ ಅಂಜಿದ ಬ್ಯಾಂಕ್ ಸಿಇಒ ಮೊದಲಿಗೆ 5 ಲಕ್ಷ ರೂಪಾಯಿಯನ್ನು ನೀಡಿದ್ದಾನೆ. ಇದಾದ ನಂತರ ನಿರಂತರವಾಗಿ ಬ್ಲಾಕ್‌ಮೇಲ್‌ಗಳು ನಡೆಯುತ್ತಲೇ ಇದ್ದು, ನಿವೃತ್ತ ಬ್ಯಾಂಕ್ ಸಿಇಒ 4 ಕೋಟಿ 39 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಇಷ್ಟಾದರು ಈ ಮಹಿಳೆ ಮತ್ತೆ ಸಿಇಒಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಗ ಸಿಇಒ ಪೊಲೀಸರ ಮೊರೆ ಹೋಗಿದ್ದಾರೆ.
ಮಹಿಳೆಗೆ ಸದ್ಯಕ್ಕೆ ಒಂದು ಲಕ್ಷ ನೀಡುವುದಾಗಿ 66 ವರ್ಷದ ನವೀ ಮುಂಬೈನ ನಿವಾಸಿಯಾದ ಕೋ ಆಪರೇಟಿವ್ ಬ್ಯಾಂಕೊಂದರ ಸಿಇಒ ಮೂಲಕವೇ ಆಕೆಯನ್ನು ಕರೆಸಿಕೊಂಡ ಪೊಲೀಸರು ಥಾಣೆ ಮೂಲದ 45 ವರ್ಷದ ಮಹಿಳೆಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ