Latest

*ಹಸುಗೂಸನ್ನು ಚರಂಡಿಗೆ ಎಸೆದ ಪಾಪಿ ತಾಯಿ*

ಪ್ರಗತಿವಾಹಿನಿ ಸುದ್ದಿ: ಹಸುಗೂಸನ್ನು ಚರಂಡಿಗೆ ಎಸೆದು ಪಾಪಿ ತಾಯಿ  ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ನಡೆದಿದೆ. 

Home add -Advt

ನವಜಾತ ಶಿಶುವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಚರಂಡಿಗೆ ಎಸೆದು ಎಸ್ಕೇಪ್ ಆಗಿದ್ದಾಳೆ. ಹಸುಗೂಸನ್ನು ಎಸೆದು ಪರಾರಿಯಾದ ತಾಯಿ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ,  ಚರಂಡಿಯಿಂದ ಮಗುವನ್ನು ಗ್ರಾಮಸ್ಥರು ಹೊರಗಡೆ ತೆಗೆದಿದ್ದಾರೆ. ಇನ್ನು ಸ್ಥಳಕ್ಕೆ  ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Related Articles

Back to top button