Latest

*ನೇಣು ಬಿಗಿದುಕೊಂಡಿದ್ದಾಗಿ ಡ್ರಾಮ ಮಾಡಿ ಪತ್ನಿ ಹೆದರಿಸಲು ಹೋಗಿ ಸಾವಿಗೆ ಶರಣಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪತ್ನಿಯನ್ನು ಹೆದರಿಸಲೆಂದು ಪತಿ ಆತ್ಮಹತ್ಯೆಯ ಡ್ರಾಮಾ ಮಾಡಲು ಹೋಗಿ ಅಚಾತುರ್ಯ ನಡೆದಿದ್ದು, ನಿಜವಾಗಿಯೂ ನೇಣಿನ ಕುಣಿಕೆ ಬಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.

Home add -Advt

ಅಮಿತ್ ಕುಮಾರ್ (28) ಮೃತ ದುರ್ದೈವಿ. ಬಿಹಾರ ಮೂಲದ ಅಮಿತ್ ಕುಮಾರ್ ಜಿಮ್ ಟ್ರೇನರ್ ಸಹ ಆಗಿದ್ದ. ಬಿಹಾರದಿಂದ ಕೆಲಸ ಹುಡುಕಿ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡಿದ್ದ.

ಈ ನಡುವೆ ಯುವತಿಯೊಬ್ಬಳನ್ನು ಪ್ರೀತಿಸಿ ವರ್ಷದ ಹಿಂದೆ ವಿವಾಹವಾಗಿದ್ದ. ವಿವಾಹಕ್ಕೆ ಮನೆಯವರ ವಿರೋಧವಿತ್ತು. ಈ ಮಧ್ಯೆ ಪತ್ನಿ ನರ್ಸಿಂಗ್ ಕೋರ್ಸ್ ಸೇರಿಕೊಂಡಿದ್ದಳು. ಓದು ಹಾಗೂ ಕೆಲಸದ ಒತ್ತಡದಲ್ಲಿ ಪತಿಯ ಕಡೆ ಗಮನ ಕೊಡುತ್ತಿರಲಿಲ್ಲ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದೆ. ಬೇಸರಗೊಂಡು ಪತ್ನಿ ತವರಿಗೆ ಹೋಗಿದ್ದಳು.

ಪತ್ನಿ ಮನವೊಲಿಸಲು ಅಮಿತ್ ಕುಮಾರ್ ಸಾಕಷ್ಟು ಯತ್ನಿಸಿದ್ದ. ಕೊನೆಗೆ ವಿಡಿಯೋ ಕಾಲ್ ಮಾಡಿ ತಾನು ನೇಣು ಬಿಗಿದುಕೊಳ್ಳುತ್ತೇನೆ ಎಂದು ಪತ್ನಿ ಬೆದರಿಸಲು ನೇಣು ಬಿಗಿದುಕೊಂಡವನಂತೆ ಡ್ರಾಮ ಮಾಡಿದ್ದ. ಹೀಗೆ ಡ್ರಾಮ ಮಾಡಲು ಹೋಗಿ ನಿಜವಾಗಿಯೂ ನೇಣಿನ ಹಗ್ಗ ಕತ್ತಿಗೆ ಬಿಗಿದು ಅಮಿತ್ ಕುಮಾರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Related Articles

Back to top button