Belagavi NewsBelgaum NewsKannada NewsKarnataka NewsLatest
*ಸಂಧಾನಕ್ಕೆಂದು ಕರೆದು ಕರುಳು ಹೊರಬರುವಂತೆ ಚಾಕುವಿನಿಂದ ಇರಿದ ದುರುಳರು: ಯುವಕ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಸಣ್ಣದೊಂದು ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಗಾಂಧಿನಗರ ಪ್ರದೇಶದಲ್ಲಿ ನಡೆದಿದೆ.
ಸುರೇಶ್ ಬಂಡಿವಡ್ಡರ (30) ಕೊಲೆಯಾದ ಯುವಕ. ರಾಜಿ ಸಂಧಾನಕ್ಕೆಂದು ಕರೆದು ದುರುಳರು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹತ್ಯೆಯಾದ ಸುರೇಶ ಮತ್ತು ಯಲ್ಲಪ್ಪ ಬಂಡಿವಡ್ಡರ (62) ನಡುವೆ ನಡೆಯುತ್ತಿದ್ದ ಜಗಳವನ್ನು ಬಗೆಹರಿಸಲು ಇಂದು ಸಂಧಾನ ಸಭೆ ನಡೆಸಲಾಗಿತ್ತು. ಆದರೆ, ಸಂಧಾನ ಸಭೆ ಬಗೆಹರಿಯದೆ ಮಾತಿಗೆ ಮಾತಿ ಬೆಳೆದು ಗಲಾಟೆ ಆರಂಭವಾಗಿದೆ. ಈ ವೇಳೆ ಯಲ್ಲಪ್ಪ ಎಂಬಾತ ಸುರೇಶ್ ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕ ಸುರೇಶ್ ನ ಕರುಳು ಹೊರಬಂದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುರೇಶ್ ನನ್ನು ರಕ್ಷಿಸಲು ಹೋದ ಸಾಗರ್ ಅಷ್ಟೇಕರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.