Belagavi NewsBelgaum NewsKannada NewsKarnataka NewsPolitics

*ದೇಶ ಕಾಯುವ ಯೋಧ, ಅನ್ನ ನೀಡುವ ರೈತ ಸಮಾಜದ ಎರಡು ಕಣ್ಣುಗಳಿದ್ದಂತೆ: ಈರಣ್ಣಾ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ದೇಶ ಕಾಯುವ ಯೋಧ, ನಾಡಿಗೆ ಅನ್ನ ನೀಡುವ ರೈತ ಇವರುಗಳು ಸಮಾಜದ ಎರಡು ಕಣ್ಣುಗಳಿದ್ದಂತೆ ಸೈನಿಕರ ಮತ್ತು ರೈತರ ಬೆನ್ನಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಗೋಕಾಕ ಮತ್ತು ಸುತ್ತಮುತ್ತಲಿನ ತಾಲೂಕುಗಳಲ್ಲಿ ವಾಸವಾಗಿರುವ ಸೈನಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಆರ್ಮಿ ಕ್ಯಾಂಟಿನ್ ಪ್ರಾರಂಭಿಸಲು ದೇಶದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. 

ಇದಕ್ಕೆ ಸ್ಪಂಧಿಸಿದ ಸಚಿವರು ಗೋಕಾಕ ನಗರದಲ್ಲಿ ಆರ್ಮಿ ಕ್ಯಾಂಟಿನ್ ಸ್ಥಾಪನೆಗೆ ಅನುಮೋಧನೆ ನೀಡಿದ ಕೇಂದ್ರ ಸಚಿವರಿಗೆ ನಿವೃತ್ತ ಸೈನಿಕರ ಪರವಾಗಿ ಹೃದಯ ಪೂರ್ವಕ ಅಭಿನಂಧನೆ ತಿಳಿಸುವುದಾಗಿ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಛೇರಿಯಲ್ಲಿ ಗೋಕಾಕ, ಮೂಡಲಗಿ, ರಾಮದುರ್ಗ ಹಾಗೂ ಯರಗಟ್ಟಿ ತಾಲೂಕಿನ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಗೋಕಾಕ ನಗರದಲ್ಲಿ ಮಾಜಿ ಸೈನಿಕರ ಯುನಿಟ್ ರನ್ ಕ್ಯಾಂಟೀನ್ ಸ್ಥಾಪನೆಗೆ ಕೇಂದ್ರ ರಕ್ಷಣಾ ಇಲಾಖೆಯಿಂದ ಮಂಜೂರು ಮಾಡಿಸುವಲ್ಲಿ ವಿಶೇಷ ಶ್ರಮವಹಿಸಿದ ಪ್ರಯುಕ್ತ ಸಂಸದ ಈರಣ್ಣ ಕಡಾಡಿ ಅವರಿಗೆ ಮಾಜಿ ಸೈನಿಕಎ ಸನ್ಮಾನವನ್ನು ಸ್ವೀಕರಿಸಿ ಅವರ ಸಮಸ್ಯಗಳನ್ನು ಆಲಿಸಿ ಅವರು ಮಾತನಾಡಿದರು.

ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿ ನಿವೃತ್ತಿ ಹೊಂದಿರುವ ಮಾಜಿ ಸೈನಿಕರ ಸಂಖ್ಯೆ ಗೋಕಾಕ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ 15 ಸಾವಿರಕ್ಕಿಂತ ಅಧಿಕವಾಗಿದೆ. ಇವರುಗಳು ಬೆಳಗಾವಿಯಲ್ಲಿ ಇರುವ ಸೇನಾ ಕ್ಯಾಂಟಿನ್ ಗೆ ಹೋಗಿ ರಿಯಾಯತಿ ದರದಲ್ಲಿ ದೊರೆಯುವ ಗೃಹಪಯೋಗಿ ವಸ್ತುಗಳನ್ನು ಖರೀದಿಸಲು  ತುಂಬಾ ದೂರವಿರುವ ಕಾರಣ ಬಹಳ ಶ್ರಮ ಪಡುತ್ತಿದ್ದರು. ಕಳೆದ 20 ವರ್ಷಗಳಿಂದ ಗೋಕಾಕನಲ್ಲಿ ಆರ್ಮಿ ಕ್ಯಾಂಟಿನ್ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದರು. ಈ ಹಿಂದೆ ನನಗೂ ಕೂಡ ವಿನಂತಿ ಮಾಡಿದ ಪ್ರಯುಕ್ತ ನನ್ನ ಸತತ ಪ್ರಯತ್ನದ ಫಲವಾಗಿ ದೇಶದ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ನನ್ನ ಮನವಿಯನ್ನು ಪರಿಗಣಿಸಿ ಗೋಕಾಕನಲ್ಲಿ  ಆರ್ಮಿ ಕ್ಯಾಂಟಿನ್ ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ ಎಂದರು.

Home add -Advt

ಈಗಾಗಲೇ ಕೇಂದ್ರ ರಕ್ಷಣಾ ಇಲಾಖೆಯ ನಿರ್ದೇಶನದಂತೆ ಗೋಕಾಕ ನಗರದಲ್ಲಿ ಕ್ಯಾಂಟೀನ್ ಸ್ಥಾಪನೆಗೆ ಭೂಮಿಯನ್ನು ಗುರುತಿಸಲು ಸ್ಥಳೀಯ ಅಧಿಕಾರಿಗಳಿಗೆ ಇಲಾಖೆಯಿಂದ ನಿರ್ದೇಶನ ನೀಡಿರುತ್ತಾರೆ. ನನ್ನ ಮನವಿಗೆ ಸ್ಪಂಧಿಸಿ ಗೋಕಾಕನಲ್ಲಿ ಕ್ಯಾಂಟೀನ್ ಸ್ಥಾಪನೆಗೆ ಅನುಮೋದನೆ ನೀಡಿದ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಂಸದರು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಮೂಡಲಗಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಿರಂತಯ್ಯ ಮಳ್ಳಿಮಠ, ಗೋಕಾಕ ತಾಲೂಕು ಅಧ್ಯಕ್ಷ ಫಕೀರಪ್ಪ ಗೌಡರ, ಪಂಡಿತಪ್ಪ ಕಾಂಬಳೆ, ಪ್ರಕಾಶ ಕರೆಪ್ಪಗೋಳ, ರಾಮಪ್ಪ ಮುಗಳಖೋಡ, ಸುಭಾಸ ಪಾಟೀಲ, ಅರ್ಜುನ ಕೋಲುರ, ಹಣಮಂತ ಕುರಬೇಟ, ರಾಜು ದಬಾಡಿ, ಮಾರುತಿ ಸುರಣ್ಣವರ, ಶ್ರೀಶೈಲ ಮುಗಳಿ, ಮಲ್ಲಪ್ಪ ಕಂಕಣವಾಡಿ, ಈರಪ್ಪ ಮುತ್ನಾಳ, ವೀರ ನಾರಿಯರಾದ ಪದ್ಮಾ ಪರಸನ್ನವರ, ಶೋಭಾ ದಾನನ್ನವರ, ಲಲೀತಾ ನಾಗನೂರ, ಭಾರತಿ ಬಡಿಗೇರ ಸೇರಿದಂತೆ ಅನೇಕ ಯರಗಟ್ಟಿ ಬೈಲಹೊಂಗಲ ಹಾಗೂ ರಾಮದುರ್ಗ ತಾಲೂಕುಗಳ ಮಾಜಿ ಸೈನಿಕರು ಉಪಸ್ಥಿತರಿದ್ದರು.

Related Articles

Back to top button