Belagavi NewsBelgaum NewsEducationKannada NewsKarnataka News

GITಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಕುರಿತು 5 ದಿನಗಳ ಕಾರ್ಯಾಗಾರ ಯಶಸ್ವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಕೆಎಲ್ಎಸ್ ಗೋಗಟೆ  ಇನ್ಸ್ಟಿಟ್ಯೂಟ್ ಆಫ್  ಟೆಕ್ನಾಲಜಿಯಲ್ಲಿ , ಎಲೆಕ್ಟ್ರಾನಿಕ್ಸ್  ಮತ್ತು  ಸಂವಹನ  ಇಂಜಿನಿಯರಿಂಗ್  ವಿಭಾಗವು ಟೆಕ್ಸಾಸ್  ಇನ್ಸ್ಟ್ರುಮೆಂಟ್ಸ್ ಯೂನಿವರ್ಸಿಟಿ  ಪಾಲುದಾರರಾದ  ಕೋಯಮತ್ತೂರಿನ  ಸ್ಟೆಪ್ ನಾಲೆಡ್ಜ್  ಸರ್ವೀಸಸ್ ಪ್ರೈವೇಟ್ ಲಿಮಿಟೆಡ್  ಅವರ ಸಹಯೋಗದೊಂದಿಗೆ  ಮೇ 21 ರಿಂದ  25, 2024 ರವರೆಗೆ  ” ಇಂಟರ್ನೆಟ್ ಆಫ್ ಥಿಂಗ್ಸ್ ” ಕುರಿತು 5 ದಿನಗಳ  ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು.

 ಸ್ಟೆಪ್ ನಾಲೆಡ್ಜ್  ಪ್ರೈವೇಟ್  ಲಿಮಿಟೆಡ್‌ನ  ನಿರ್ದೇಶಕ ವಿ.ಎಸ್. ರಮೇಶ್ ಈ ಕಾರ್ಯಾಗಾರಕ್ಕೆ  ಸಂಪನ್ಮೂಲ ವ್ಯಕ್ತಿಯಾಗಿದ್ದರು.  ಇಂಟರ್ನೆಟ್  ಆಫ್ ಥಿಂಗ್ಸ್, ಟಿಐ ಎಂಎಸ್ಪಿ 430 ಮೈಕ್ರೋ ಕಂಟ್ರೋಲರ್ಗಳು , ಸೆನ್ಸಾರ್ ಬಳಕೆ, ನೋಡ್ ಪ್ರೋಗ್ರಾಮಿಂಗ್ , ಪ್ರೋಟೋಕಾಲ್ಗಳು,  ರೋಬೋಟಿಕ್ಸ್  ಅಪ್ಲಿಕೇಶನ್ ವಿಷಯಗಳ  ಕುರಿತು  ಪ್ರಾಯೋಗಿಕ  ವಿಷಯಗಳ  ಜ್ಞಾನ ನೀಡಿದರು.

ಕೆಎಲ್ಎಸ್ ಜಿ ಆಯ್ ಟಿಯ  ಡಾ. ಮಂಜುನಾಥ್ ಎಂ, ಡಾ. ರಮೇಶ್ ಕೋಟಿ  ಮತ್ತು ಪ್ರೊ. ನಿಖಿಲ್ ಇನಾಂದಾರ್ ಅವರು  ಕಾರ್ಯಾಗಾರವನ್ನು  ಸಂಯೋಜಿಸಿದ್ದರು, 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು,  ಅಧ್ಯಾಪಕರು ಕಾರ್ಯಾಗಾರದಲ್ಲಿ  ಸಕ್ರಿಯವಾಗಿ  ಭಾಗವಹಿಸಿದ್ದರು. ಇಲೆಕ್ಟ್ರಾನಿಕ್ಸ್  ಮತ್ತು ಸಂವಹನ  ಇಂಜಿನಿಯರಿಂಗ್  ವಿಭಾಗದ ಮುಖ್ಯಸ್ಥೆ  ಡಾ. ಸುಪ್ರಿಯಾ  ಶಾನಭಾಗ್, ಪ್ರಾಂಶುಪಾಲ  ಡಾ. ಎಂ.ಎಸ್. ಪಾಟೀಲ್  ಅವರು ಕಾರ್ಯಾಗಾರವನ್ನು  ಯಶಸ್ವಿಯಾಗಿ ಆಯೋಜಿಸಿದ  ತಂಡವನ್ನು  ಅಭಿನಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button