Belagavi NewsBelgaum NewsKannada NewsKarnataka News

*ಮನೆಯ ಮುಂದೆ ಇಟ್ಟಿದ್ದ ನೀರಿನ ಕ್ಯಾನ್ ಕದ್ದ ಕಳ್ಳ: ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಪಿರನವಾಡಿ ಗ್ರಾಮದಲ್ಲಿ ಮನೆಯ ಮುಂದೆ ಇಟ್ಟಿದ್ದ ನೀರಿನ ಕ್ಯಾನ್ ತೆಗೆದುಕೊಂಡು ಕೇವಲ 30 ಸೆಕೆಂಡುಗಳಲ್ಲಿ ಕಳ್ಳ ಓಡಿಹೋದ ಘಟನೆ ನಡೆದಿದ್ದು, ಕಳ್ಳತನದ ದೃಶ್ಯ ಈಗ ಎಲ್ಲಡೆ ವೈರಲ್ ಆಗುತ್ತಿದೆ.

ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ಸಿದ್ಧೇಶ್ವರ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಪೀರನವಾಡಿಯ ಮನೆಯೊಂದರ ಮುಂದೆ ಇಟ್ಟಿದ್ದ ನೀರಿನ ಕ್ಯಾನ್ ಕೇವಲ 30 ಸೆಕೆಂಡುಗಳಲ್ಲಿ ಕಳ್ಳ ಎತ್ತಿಕೊಂಡು ಹೋಗಿದ್ದಾರೆ. ಕಳ್ಳತನದ ವಿಡಿಯೋ ಮನೆಯ ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳ್ಳನನ್ನು ಆದಷ್ಟು ಬೇಗ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button